ಬಚ್ಚನ್ ಹೆಸರಲ್ಲಿ ಉದ್ಯಮಿಗೆ ಥ್ರೆಟ್ ಕಾಲ ಕೇಸ್, ಮೂವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ರೌಡಿಶೀಟರ್ ಬಚ್ಚನ್ ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಟಿಪ್ಪುನಗರದ ಜಾಫರ್ ಖಾನ್ ಅಲಿಯಾಸ್ ಶತ್ರು (19), ಜಾಫರ್ ಸಾದಿಕ್ ಅಲಿಯಾಸ್ ಟಿನ್ನರ್(21) ಹಾಗೂ ಮೊಹ್ಮದ್ ಜುನೇದ್ (21) ಎಂಬುವವರನ್ನು ಬಂಧಿಸಿದ್ದು, ಅವರಿಂದ ಒಂದು ಮೊಬೈಲ್, ಬೈಕ್ ಮತ್ತಿ ಲಾಂಗ್ ಜಪ್ತಿ ಮಾಡಲಾಗಿದೆ.

READ | ಭದ್ರಾವತಿಯ ಗಣೇಶ್ ಭಟ್ ಬಳಿ ಲತಾ ಮಂಗೇಶ್ಕರ್ ಜನ್ಮ ದಿನ, ನಿಧನ ದಿನದ ನೋಟು ಸಂಗ್ರಹ, ಇನ್ನೇನು ಮಾಹಿತಿ ಇದೆ?

ಹಣಕ್ಕಾಗಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಗಳು
ಉದ್ಯಮಿ ನಾಸೀರ್ ಖಾನ್ ಎಂಬಾತನಿಗೆ ಹಣ‌ ನೀಡುವಂತೆ ಬೇಡಿಕೆ ಇಡಲಾಗಿತ್ತು. ಅದಕ್ಕೆ ಕೇರ್ ಮಾಡದ್ದಕ್ಕೆ ಮಗನ ಕೊಲೆಗೂ ಯತ್ನಿಸಲಾಗಿತ್ತು. ಇದಕ್ಕಾಗಿ, ತುಂಗಾನಗರ ಠಾಣೆಯಲ್ಲಿ ದೂರು ನೀಡಿದ್ದರು.
ತುಂಗಾನಗರ ಠಾಣೆಯಲ್ಲಿ ರಚಿಸಿದ್ದ ವಿಶೇಷ ತಂಡವು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ.

error: Content is protected !!