ಯುವತಿಯರೇ ಅಪರಿಚಿತರಿಗೆ ಚಿತ್ರ ಕಳುಹಿಸುವ ಮುನ್ನ ಹುಷಾರ್, ಶಿವಮೊಗ್ಗದಲ್ಲಿ ನಡೆಯಿತು ಯಡವಟ್ಟು, ಠಾಣೆ ಮೆಟ್ಟಿಲೇರಿದ ಕೇಸ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರಿಗೆ ಪರಿಚಯವಾಗಿದ್ದ ಯುವತಿಯೊಬ್ಬಳ ನಗ್ನ ಚಿತ್ರಗಳನ್ನು ವಾಟ್ಸಾಪ್ ಮೂಲಕ ತರಿಸಿಕೊಂಡು ಇನ್ನಷ್ಟು ಚಿತ್ರ, ವಿಡಿಯೋ ಕಳುಹಿಸುವಂತೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗದ ಯುವತಿಯೊಬ್ಬರಿಗೆ ಉತ್ತರ ಕನ್ನಡದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ಪರಿಚಯ ಪ್ರೀತಿಯಾಗಿ ಅಂಕುರಿಸಿದೆ. ಯುವತಿಗೆ ಮದುವೆಯಾಗುವುದಾಗಿಯೂ ನಂಬಿಸಿದ್ದಾನೆ. ಹೀಗಾಗಿ, ನಗ್ನ ವಿಡಿಯೋ ಮತ್ತು ಚಿತ್ರಗಳನ್ನು ಕಳುಹಿಸುವಂತೆ ಕೇಳಿದ್ದಕ್ಕೆ ಆಕೆಯೂ ಕಳುಹಿಸಿದ್ದಾಳೆ.

READ | ಪಿಯುಸಿ ಪಾಸ್ ಆದವರಿಗೆ ಶಿವಮೊಗ್ಗ, ಬೆಂಗಳೂರಿನಲ್ಲಿ ಉದ್ಯೋಗ, ಆಕರ್ಷಕ ವೇತನ, ಕೂಡಲೇ ಅರ್ಜಿ ಸಲ್ಲಿಸಿ

ಬೇರೆ ಬೇರೆ ಭಂಗಿಯ ಚಿತ್ರ ಕಳುಹಿಸುವಂತೆ ಒತ್ತಡ
ಯುವಕ ಮತ್ತು ಯುವತಿಯರು ಪರಸ್ಪರ ವಾಟ್ಸಾಪ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದು, ಚಾಟ್ ಮಾಡುತ್ತಾ ಸಲುಗೆಯಿಂದ ವ್ಯವಹರಿಸಿದ್ದಾರೆ. ಮದುವೆಯಾಗುವುದಾಗಿ ಹೇಳಿದ್ದರಿಂದ ಯುವತಿಯು ಚಿತ್ರಗಳನ್ನೂ ಕಳುಹಿಸಿದ್ದಾಳೆ. ನಂತರವೂ ಪದೇ ಪದೆ ಚಿತ್ರ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಕಿರುಕುಳ ನೀಡುತ್ತಿದ್ದರಿಂದ ಚಾಟಿಂಗ್ ಮತ್ತು ಫೋನ್ ಮಾಡುವುದನ್ನೇ ಯುವತಿ ನಿಲ್ಲಿಸಿದ್ದಾಳೆ. ನಂತರ, ಈಗಾಗಲೇ ಕಳುಹಿಸಿರುವ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಸಂಬಂಧ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ. ಆರೋಪಿಯ ಹುಡುಕಾಟ ನಡೆಯುತ್ತಿದೆ.

https://www.suddikanaja.com/2021/09/25/dacoit-in-a-sagara-road/

error: Content is protected !!