ಬೆಳಕು ಯೋಜನೆ ಅಡಿ ರಾಜ್ಯದ ಪ್ರತಿ ಮನೆಗೆ ಕರೆಂಟ್

 

 

ಸುದ್ದಿ ಕಣಜ.ಕಾಂ | KARNATAKA | BELAKU SCHEME 
ತೀರ್ಥಹಳ್ಳಿ: ರಾಜ್ಯದ ಯಾವುದೇ ಹಳ್ಳಿ ಅಥವಾ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ವಂಚಿತ ಗುಡಿಸಲು/ ಮನೆಗಳು ಇರದಂತೆ, ಅಭಿಯಾನ ರೂಪದಲ್ಲಿ, ಮಹತ್ವಾಕಾಂಕ್ಷೆಯ ‘ಬೆಳಕು’ (Raita Belaku  scheme) ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra) ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Aaraga Jnanendra

ತೀರ್ಥಹಳ್ಳಿ (thirthahalli)ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಕು ಯೋಜನೆಯ ಅನುಷ್ಠಾನಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO)ಗಳು ಪ್ರಾಶಸ್ತ್ಯ ನೀಡಬೇಕು. ಕೇಂದ್ರ ಪ್ರಾಯೋಜಿತ ಈ ಯೋಜನೆಯ ಆಶಯಗಳನ್ನು ಪ್ರತಿ ಬಡವರ ಮನೆ ತಲುಪಬೇಕು ಎಂದು ತಿಳಿಸಿದರು.

ಯೋಜನೆಯ ಅರ್ಹ ಫಲಾನುಭವಿಗಳು ಬಂದು ಅರ್ಜಿ ಕೊಡಲಿ ಆಮೇಲೆ ನೋಡೋಣ ಎಂಬ ಧೋರಣೆ ಬಿಟ್ಟು ಅಧಿಕಾರಿಗಳೇ ಅವರ ಬಳಿ ಹೋಗಿ, ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು. ವಿದ್ಯುತ್ ಸಂಪರ್ಕಕ್ಕೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಯಾವುದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರ ಮನೆಯಲ್ಲಿಯೂ, ನಮ್ಮ ಮನೆಗೆ ಕರೆಂಟ್ ಕನೆಕ್ಷನ್ ಇಲ್ಲ ಎಂಬ ದೂರು ಬರಬಾರದು. ನೂರಕ್ಕೆ ನೂರು ಪ್ರತಿಶತ ಯೋಜನೆ ಕಾರ್ಯಗತ ವಾಗಬೇಕು. ಬೆಳಕು ಯೋಜನೆಯ ನಿರ್ವಹಣೆ ಮತ್ತು ಕಾರ್ಯಗತಗೊಂಡಿದ್ದರ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

https://www.suddikanaja.com/2022/01/22/shimoga-district-police-department-has-taken-several-steps-to-regulate-ganja/

error: Content is protected !!