ಶಿವಮೊಗ್ಗ ನಗರದಲ್ಲಿ ನಾಲ್ಕು ದಿನ ನಿಷೇಧಾಜ್ಞೆ ಜಾರಿ, ಯಾವಾಗಿಂದ ಅನ್ವಯ, ಆದೇಶದಲ್ಲೇನಿದೆ?

 

 

ಸುದ್ದಿ ಕಣಜ.ಕಾಂ | CITY | SECTION 144
ಶಿವಮೊಗ್ಗ: ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಫೆಬ್ರವರಿ 16ರ ಬೆಳಗ್ಗೆ 6 ಗಂಟೆಯಿಂದ 19ರ ರಾತ್ರಿ 9 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಿ ಆದೇಶಿಸಲಾಗಿದೆ.
ನಗರದಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಹಸೀಲ್ದಾರ್ ಎನ್.ಜೆ.ನಾಗರಾಜ್ ಅವರು ಆದೇಶಿಸಿದ್ದಾರೆ.
ಆದೇಶದಲ್ಲಿ ಏನಿದೆ?

  1. ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದಂತೆ, ವಸ್ತ್ರ ಸಂಹಿತೆಯನ್ನು ಯಾವುದೇ ಜಾತಿ ಧರ್ಮ ಸೂಚಕದ ವಸ್ತ್ರಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಧರಿಸುವ, ಪ್ರದರ್ಶಿಸುವ ಮೂಲಕ ಶೈಕ್ಷಣಿಕ ವಾತಾವರಣ ಕಲುಷಿತಗೊಳಿಸುವಂತಹ ಸನ್ನಿವೇಶಗಳನ್ನು ಸೃಷ್ಟಿಸುವುದನ್ನು ನಿಷೇಧಿಸಲಾಗಿದೆ.
  2. ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಶಿಕ್ಷಣ ಸಮಿತಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸಂಘ, ಸಂಘಟಿಸುವುದು ಪ್ರಚೋದಿಸುವುದನ್ನು ನಿಷೇಧಿಸಲಾಗಿದೆ.
  3. ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು, ಹಿಜಾಬ್ ಅಥವಾ ಇನ್ನು ಯಾವುದೇ ಧಾರ್ಮಿಕ ವಿಷಯಗಳ ಕುರಿತು ಅನಗತ್ಯ ಚರ್ಚೆ ಹುಟ್ಟುಹಾಕಿ ಕೋಮು ಸೌಹಾರ್ದತೆಯನ್ನು ಹಾಳು ಮಾಡತಕ್ಕದ್ದು.
  4. ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐಐದು ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.
  5. ಯಾವುದೇ ಮೆರವಣಿಗೆ ಅಥವಾ ಸಭೆ, ಸಮಾರಂಭಗಳನ್ನು ವಿಜಯೋತ್ಸವ, ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಿದೆ.
  6. ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಇನ್ನು ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆ ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ.
  7. ಯಾವುದೇ ಪಟಾಕಿ, ಸಿಡಿಮದ್ದು ಬಳಸುವುದು, ಕಲ್ಲು, ಕ್ಷಪಣಿಗಳನ್ನು ಎಸೆಯುವುದು ನಿಷೇಧ
  8. ಯಾವುದೇ ವ್ಯಕ್ತಿ, ಶವಗಳ ಪ್ರತಿಕೃತಿ ಪ್ರದರ್ಶ ಮಾಡುವುದು, ಪ್ರಚೋದನಾಕಾರಿ ಬಹಿರಂಗ ಘೋಷಣೆಗಳನ್ನು ಕೂಗುವುದು ನಿಷಿದ್ಧ.
  9. ಈಗಾಗಲೇ ಸರ್ಕಾರ ಕಾರ್ಯಕ್ರಮಗಳು ನಿಗದಿಯಾಗಿದದಲ್ಲಿ ಪ್ರಾಧಿಕಾರದ ಅನುಮತಿ ಇಲ್ಲದೇ ಮುಂದುವರಿಯತಕ್ಕದ್ದಲ್ಲ. ಹೀಗೆ ವಿವಿಧ ನಿಯಮಗಳನ್ನು ಹೇರಲಾಗಿದೆ.

error: Content is protected !!