ಹರ್ಷ ಶವಯಾತ್ರೆ ಆರಂಭ, ಮುಂದುವರಿದ ಉದ್ವಿಗ್ನ ಸ್ಥಿತಿ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ದುಷ್ಕಮಿಗಳಿಂದ ಹಲ್ಲೆಗೀಡಾಗಿ ಮೃತಪಟ್ಟಿರುವ ಭಜರಂಗ ದಳ ಕಾರ್ಯಕರ್ತ ಹರ್ಷ ಅವರ ಶವಯಾತ್ರೆ ಆರಂಭಗೊಂಡಿದ್ದು, ಬಿ.ಎಚ್.ರಸ್ತೆಯಲ್ಲಿ ಉದ್ವಿಗ್ನ ಸ್ಥಿತಿ ಇದೆ.
ಸೀಗೆಹಟ್ಟಿಯ ಕುಂಬಾರ ಬೀದಿಯಲ್ಲಿರುವ ನಿವಾಸಿದಿಂದ ಶವಯಾತ್ರೆ ಆರಂಭಗೊಂಡಿದ್ದು, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಬಿ.ಎಚ್.ರಸ್ತೆ, ಹೊಳೆ ಬಸ್ ನಿಲ್ದಾಣದ ಮೂಲಕ ರೋಟರಿ ಚಿತಾಗಾರಕ್ಕೆ ತಲುಪಲಿದೆ. ನಂತರ ಅಲ್ಲಿ ಶವಸಂಸ್ಕಾರ ನಡೆಯಲಿದೆ.

RELATED NEWS 

ಶವಯಾತ್ರೆಯಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಬಿಜೆಪಿಯ ಪ್ರಮುಖರು, ಹಿಂದೂಪರ ಸಂಘಟನೆಯವರು ಭಾಗಿಯಾಗಿದ್ದಾರೆ. ಗುಂಪನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಕಷ್ಟಪಡುತಿದ್ದು, ಎಷ್ಟೇ ತಿಳಿಹೇಳಿದರೂ ಪ್ರಯೋಜನವಾಗುತ್ತಿಲ್ಲ.

https://www.suddikanaja.com/2022/02/08/hijab-saffron-controversy-lathi-charge-in-shivamogga/

error: Content is protected !!