Mallikarjun Kharge | ಬಿಜೆಪಿಗೆ ಮಲ್ಲಿಕಾರ್ಜುನ್ ಖರ್ಗೆ ಚಾಲೆಂಜ್

Kharge

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ನಡೆದ ಮಾಧ್ಯಮಗೋಷ್ಠಿ ಹಾಗೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು ಮಾತನಾಡಿದ್ದು, ಬಿಜೆಪಿಗೆ ಹಲವು ಸವಾಲುಗಳನ್ನು ಹಾಕಿದ್ದಾರೆ.

READ | ಸಾಗರ, ಶಿಕಾರಿಪುರದಲ್ಲಿ 21 ಕಾರ್ಯಕರ್ತರಿಗ ಗೇಟ್ ಪಾಸ್, ಕಾರಣವೇನು?

ಖರ್ಗೆ ಮಾಡಿದ ಆರೋಪಗಳಿವು

  • ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಅಪಮಾನಿಸಿದ್ದೇ ಬಿಜೆಪಿ. ಅಂಬೇಡ್ಕರ್ ಅವರೇ ಸಂವಿಧಾನ ರಚನೆ‌ ಕರಡು ಸಮಿತಿಯಲ್ಲಿದ್ದಾಗ ಕಾಂಗ್ರೆಸ್ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಹಾಗಾದರೇ ಕಾಂಗ್ರೆಸ್ ಹೇಗೆ ಸಂವಿಧಾನ ಮತ್ತು ಬಿಜೆಪಿಯನ್ನು ಅವಹೇಳನ ಮಾಡಿರಲು ಸಾಧ್ಯ? ಆರ್.ಎಸ್.ಎಸ್.ನವರೇ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾರೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ.
  • 91 ಸಲ ತನ್ನನ್ನು ಮತ್ತು ಅಂಬೇಡ್ಕರ್ ಅವರನ್ನು ಬೈಯ್ದಿರುವುದಾಗಿ ಮೋದಿ ಹೇಳಿದ್ದಾರೆ. ಅವರೂ ನಮ್ಮನ್ನು ಬೈಯ್ದಿದ್ದಾರೆ. ಅದರ ಲೆಕ್ಕ ನಮ್ಮ ಬಳಿ ಇಲ್ಲ. ಬೈಗುಳ ಲೆಕ್ಕವಿಡುವುದೆಲ್ಲ ನಮಗೆ ಬರುವುದಿಲ್ಲ.
  • ಬಿಜೆಪಿ ಆಡಳಿತ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಕೊಡುಗೆಗಳೇನು? ಯಾವುದಾದರೂ ಒಂದು ಪ್ರಾಜೆಕ್ಟ್ ಹೊಸದಾಗಿ ತಂದಿರುವುದು ತೋರಿಸಲಿ. ಅವರು ಕಾಮಗಾರಿ/ ಯೋಜನೆಗಳನ್ನು ಉದ್ಘಾಟನೆ ಮಾಡಿರಬಹುದು. ಆದರೆ, ಅವು ಕಾಂಗ್ರೆಸ್ ಅವಧಿಯಲ್ಲೇ ಆಗಿದ್ದವಾಗಿವೆ.
  • ಕಾಂಗ್ರೆಸ್ 1952ರಿಂದ 2014ರವರೆಗೆ ದೇಶಕ್ಕೆ‌ ನೀಡಿರುವ ಕೊಡುಗೆಗಳೇನು ಎನ್ನುವ ಬಿಜೆಪಿಯವರು ಇತಿಹಾಸ ಅರಿಯಲಿ. ನರೇಗಾ, ಕಡ್ಡಾಯ ಶಿಕ್ಷಣ ಕಾಯ್ದೆ, ನೀರಾವರಿ ಯೋಜನೆ, ಶೈಕ್ಷಣಿಕ‌‌ ಕ್ರಾಂತಿ,‌ ಬಾಹ್ಯಾಕಾಶ, ರೈಲ್ವೆ, ವಿಮಾನಯಾನ, ಆಹಾರ ಭದ್ರತೆ…. ಹೀಗೆ ಸಾಕಷ್ಟಿವೆ ಯೋಜನೆಗಳನ್ನು ನೀಡಲಾಗಿದೆ.
  • ಕಾಂಗ್ರೆಸ್ ಪ್ರಣಾಳಿಕೆಯಲ್ಲಿ‌ ನೀಡಿರುವ ಭರವಸೆಗಳು ಅಧಿಕಾರಕ್ಕೆ‌ ಬಂದ ತಕ್ಷಣ ಜಾರಿಗೆ ತರಲಾಗುವುದು. ಅದರ ಬಗ್ಗೆ ಯಾವುದೇ ಅನುಮಾನ ಬೇಡ.
  • ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ‘ಗಾಳಿ’ಯ ಮೇಲೆಯೂ ತೆರಿಗೆ ವಿಧಿಸುತ್ತಾರೆ. ಬಹುಶಃ ಅದಿನ್ನೂ ಅವರ ಕಣ್ಣಿಗೆ ಬಿದ್ದಿಲ್ಲವೆನಿಸುತ್ತದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ್‌ ಜಯಕುಮಾರ್‌, ಪ್ರಧಾನ ಕಾರ್ಯದರ್ಶಿ ಅವಿನಾಶ್‌ ಪಾಂಡೆ, ಅಭ್ಯರ್ಥಿಗಳಾದ ಎಚ್‌.ಸಿ.ಯೋಗೇಶ್‌, ಶ್ರೀನಿವಾಸ್‌ ಕರಿಯಣ್ಣ, ಪಕ್ಷದ ಪ್ರಮುಖರಾದ ಸಿರಿವಲ್ಲಿಪ್ರಸಾದ್‌, ಚಂದ್ರಭೂಪಾಲ್‌, ಮಂಜುನಾಥ್‌ ಭಂಡಾರಿ ಉಪಸ್ಥಿತರಿದ್ದರು.

Postal ballet | ಮನೆಯಿಂದಲೇ ಓಟ್’ಗೆ ಮೊದಲ ದಿನವೇ ಭರ್ಜರಿ‌ ರೆಸ್ಪಾನ್ಸ್, ಎಷ್ಟು ಮತದಾನವಾಗಿದೆ?

error: Content is protected !!