ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಗೃಹ ಸಚಿವ ಅಮಿತ್ ಶಾ (amit shah) ಅವರು ಮೇ 1ರಂದು ಶಿವಮೊಗ್ಗ ನಗರದಲ್ಲಿ ರೋಡ್ ಶೋ ನೆಡಸಲಿದ್ದಾರೆ.
ಎಲ್ಲಿಂದ ರೋಡ್ ಶೋ?
ರೋಡ್ ಶೋ ಅನ್ನು ಶಿವಪ್ಪ ನಾಯಕ ವೃತ್ತದಿಂದ ಪ್ರಾರಂಭಿಸಿ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ, ಜೈಲ್ ರಸ್ತೆ ಮುಖಾಂತರ ಬಂದು ಲಕ್ಷ್ಮೀ ಟಾಕೀಸ್ ವೃತ್ತದಲ್ಲಿ ಮುಕ್ತಾಯವಾಗಲಿದೆ.
READ | ಮನೆಯಿಂದಲೇ ಓಟ್’ಗೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್, ಎಷ್ಟು ಮತದಾನವಾಯ್ತು?
ಕೆಳಕಂಡ ರಸ್ತೆಯಲ್ಲಿ ಶೂನ್ಯ ಸಂಚಾರ
ಮೇ 1ರಂದು ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯವರೆಗೆ ಬಿ.ಎಚ್ ರಸ್ತೆಯ ಕರ್ನಾಟಕ ಸಂಘ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತದ ಗೋಪಿ ವೃತ್ತ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್ ವರೆಗೆ ಶೂನ್ಯ ಸಂಚಾರ ಮಾರ್ಗವಾಗಿರುತ್ತದೆ. ಸದರಿ ರಸ್ತೆಗಳಲ್ಲಿ ಯಾವುದೇ ವಾಹನಗಳ ನಿಲುಗಡೆ (ಪಾರ್ಕಿಂಗ್)ಗೆ ಅವಕಾಶವಿರುವುದಿಲ್ಲ. ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಸದರಿ ಮಾರ್ಗಗಳನ್ನು ಹೊರತು ಪಡಿಸಿ, ಬದಲೀ ಮಾರ್ಗಗಳನ್ನು ಬಳಸಲು ಕೋರಲಾಗಿದೆ.
ರೋಡ್ ಶೋ ನಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಫ್ರೀಡಂ ಪಾರ್ಕ್ ಮೈದಾನ, ಎನ್ಇಎಸ್ ಮೈದಾನ ಮತ್ತು ಸೈನ್ಸ್ ಕಾಲೇಜ್ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ವಾಹನಗಳನ್ನು ಸದರಿ ಸ್ಥಳಗಳಲ್ಲಿ ನಿಲುಗಡೆ ಮಾಡುವುದು.