ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ಅಂಗವಿಕಲರಿಗೆ ಚುನಾವಣಾ ಆಯೋಗವು ಮನೆಯಿಂದಲೇ ಮತ ಚಲಾಯಿಸುವ ಅವಕಾಶ ನೀಡಿದ್ದು, ಈ ಪ್ರಕ್ರಿಯೆ ಏ.29 ರಿಂದ ಆರಂಭವಾಗಿದೆ. ಜಿಲ್ಲೆಯಲ್ಲಿ ಮೊದಲ ದಿನವೇ ಶೇ.82.32 ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟ 80 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರ ಒಟ್ಟು 2364 ಮತದಾರರ ಪೈಕಿ ಇಂದು ಪೋಸ್ಟಲ್ ಬ್ಯಾಲಟ್ ಮೂಲಕ 1946 ಮತಗಳನ್ನು ಚಲಾಯಿಸಲಾಗಿದೆ. ಇಂದಿನ ಮತ ಚಲಾವಣೆ 2206 ಗುರಿಗೆ 1946 ಮತ ಚಲಾವಣೆ ಆಗಿದೆ.
READ | ಭಾರತದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ವಿದ್ಯಾವಂತರ ಸಂಖ್ಯೆಯಲ್ಲಿನ ಏರಿಕೆಯೇ ಕಾರಣ!
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 1894, ಅಂಗವಿಕಲ 490 ಮತದಾರರು ಸೇರಿ ಒಟ್ಟು 2364 ಮತದಾರರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಇಂದು ಮೊದಲನೇ ದಿನ 80 ವರ್ಷ ಮೇಲ್ಪಟ್ಟ 1585 ಮತ್ತು ಅಂಗವಿಕಲ 361 ಒಟ್ಟು 1946 ಮತದಾರರು ಮತ ಚಲಾಯಿಸಿದ್ದಾರೆ. ಮೇ 6ರ ವರೆಗೆ ಮತದಾನ ನಡೆಯಲಿದೆ.
Mallikarjun Kharge | ಖರ್ಗೆಯನ್ನು ತಂದೆ ಸ್ವರೂಪದಲ್ಲಿ ಕಾಣುತ್ತಿದ್ದೆ, ಹೀಗೇಕೆಂದರು ಈಶ್ವರಪ್ಪ?