Mallikarjun Kharge | ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದ ಬಿ.ಎಸ್.ಯಡಿಯೂರಪ್ಪ

BS Yediyurappa

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಮಾತನಾಡಿದ್ದು, ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು ಚಿತ್ರದುರ್ಗದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಕಾಂಗ್ರೆಸ್ (Congress) ಇತ್ತೀಚೆಗೆ ನಡೆಸಿದ ಎಸ್‌ಸಿ, ಎಸ್‌ಟಿ ಸಮಾವೇಶಕ್ಕೆ ಬೆಲೆ ಎಲ್ಲಿದೆ? ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು.

ಸ್ಯಾಂಟ್ರೋ ರವಿ (Santro Ravi) ವಿಚಾರವಾಗಿ ಮಾತನಾಡಿದ‌ ಬಿ.ಎಸ್.ವೈ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಗಿ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಸಂಪುಟ ವಿಸ್ತರಣೆ ಆಗುವ ಬಗ್ಗೆ ಮಾಹಿತಿ ಇದೆ. ಈಶ್ವರಪ್ಪ ಅವರು ಸಂಪುಟ ಸೇರಬೇಕೆಂಬ ಅಪೇಕ್ಷೆ ನಮಗೂ ಇದೆ.
ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ

ಬಿಜೆಪಿಯ ಪ್ರತಿ ಕೆಲಸಕ್ಕೂ ಟೀಕೆ
ಬಿಜೆಪಿಯವರು ಮಾಡುವ ಪ್ರತಿ ಕೆಲಸಕ್ಕೂ ಟೀಕೆ ಮಾಡಲಾಗುತ್ತಿದೆ. ಎಸ್‌ಸಿ, ಎಸ್‌ಟಿ ಬಗ್ಗೆ ಮಾಡಿರುವ ತೀರ್ಮಾನವನ್ನು ತಿರುಚಿ ಮನಬಂದಂತೆ ಒಬ್ಬ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಅದು ಎಷ್ಟು ಸರಿಯೆಂಬುದು ಅರ್ಥವಾಗದ ವಿಷಯ. ನಾವು ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.

READ | ಬಜರಂಗ ದಳ ಪ್ರಮುಖನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಯತ್ನ, ಸಾಗರ ಬಂದ್’ಗೆ ಕರೆ

ನಾವು‌ ಮಾಡಿದ್ದನ್ನಾದರೂ‌ ಸ್ವಾಗತಿಸಿ
ಕಾಂಗ್ರೆಸ್‌ನವರು ವಾಸ್ತವ ಅರಿತು ಮಾತನಾಡಬೇಕು. ಅವರಂತೂ ಮಾಡಲಿಲ್ಲ. ನಾವು ಮಾಡಿದ್ದನ್ನಾದರೂ ಸ್ವಾಗತಿಸಬೇಕಿತ್ತು. ಟೀಕೆ, ಟಿಪ್ಪಣಿ ಮಾಡುವುದು ಅವರಿಗೆ ಗೌರವ ತರುವಂತದ್ದಲ್ಲ. ಮೀಸಲಾತಿ ಬಗ್ಗೆ ಯಾವುದೇ ಗೊಂದಲವಿಲ್ಲ. ಎಸ್‌ಸಿ, ಎಸ್‌ಟಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಅದರಂತೆ ನಾವು ಮುಂದೆ ಹೋಗುತ್ತೇವೆ ಎಂದರು.

https://suddikanaja.com/2023/01/09/sagar-bandh-on-jan-10/

error: Content is protected !!