ಹೊಸಮನೆಯಲ್ಲಿ ಸಿದ್ಧವಾಗಲಿದೆ 260 ಮೀಟರ್ ಉದ್ದದ ವಾಕಿಂಗ್ ಪಾರ್ಕ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹೊಸಮನೆಯಲ್ಲಿ 50 ಲಕ್ಷ ರೂ. ವೆಚ್ಚದ ಪಾರ್ಕ್ ನಿರ್ಮಾಣಕ್ಕೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ನಗರದ ಜೈಲು ರಸ್ತೆಯ ಚಾನೆಲ್ ಎಡಭಾಗದ ಸೇತುವೆ ಪಕ್ಕದಿಂದ ನಾಗಪ್ಪ ದೇವಸ್ಥಾನದವರಗೆ 260 ಮೀಟರ್ ಉದ್ದದ ಸಾರ್ವಜನಿಕರಿಗೆ ವಾಕಿಂಗ್ ಪಾರ್ಕ್, ಮಕ್ಕಳಿಗೆ ಆಟೋಪಕರಣ, ಜಿಮ್ ಉಪಕರಣಗಳುಳ್ಳ ಸುಸಜ್ಜಿತ 50 ಲಕ್ಷ ರೂ. ವೆಚ್ಚದ ಪಾರ್ಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಯುವ ಮುಖಂಡ ಕೆ.ರಂಗನಾಥ್, ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಬಡಾವಣೆ ಜ್ಯೋತಿ ಅರಳಪ್ಪ, ಚಂದ್ರು ಗೆಡ್ಡೆ, ನಾಗರಾಜ್, ಶರತ್, ಚೇತನ್, ಪವನ್, ಸುನೀತ, ಸವಿತಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಪ್ರವೀಣ್ ಕುಮಾರ್, ನಗರಾಧ್ಯಕ್ಷ ಎಚ್.ಪಿ.ಗಿರೀಶ್, ಯುವ ಕಾಂಗ್ರೆಸ್ ಮುಖಂಡ ಪುಷ್ಪಕ್ ಕುಮಾರ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!