ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ: ಫೆ.25ರಂದು ರೈಲ್ವೆ ಬ್ರಿಡ್ಜ್ ಕಾಮಗಾರಿ ಇದ್ದು ಫೀಡರ್-3 ಪುರಲೆ ಮತ್ತು ಫೀಡರ್-8 ಜಾವಳ್ಳಿ 11 ಕೆ.ವಿ. ಮಾರ್ಗಮುಕ್ತತೆ ನೀಡುವುದರಿಂದ ಫೆ.25 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗುರುಪುರ, ಪುರಲೆ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಹಸೂಡಿ ರಸ್ತೆ, ವೆಂಕಟೇಶನಗರ, ಸುಬ್ಬಯ್ಯ ಆಸ್ಪತ್ರೆ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ಶಿವಮೊಗ್ಗದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ಫೆ.26ರಂದು ವಿದ್ಯುತ್ ವ್ಯತ್ಯಯ
ಫೆ.26 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಎಂ.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-2 ಫೀಡರ್ ಗಳಿಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಇರುವುದರಿಂದ ನಗರದ ಬಾಲರಾಜ್ ಅರಸ್ ರಸ್ತೆ, ಸಿಟಿ ಕಾರ್ಪೋರೇಶನ್ ರಸ್ತೆ, ಫ್ಲವರ್ ಮಾರ್ಕೆಟ್ ರಸ್ತೆ, ಅಂಬೇಡ್ಕರ್ ಭವನ, ಕಸ್ತೂರಿಬಾ ಕಾಲೇಜು, ಬಿಎಸ್.ಎನ್. ಎಲ್ ಆಫೀಸ್, ನೆಹರೂ ರಸ್ತೆ, ದುರ್ಗಿಗುಡಿ, ಪಾರ್ಕ್ ಬಡಾವಣೆ, ಗೋಪಿ ಸರ್ಕಲ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.