ಎಸ್ಸೆಸ್ಸೆಲ್ಸಿ ಪರೀಕ್ಷೆ, ಆಕಾಶವಾಣಿ ಫೋನ್ ಇನ್, ಯಾವ ದಿನ ಯಾವ ವಿಷಯದ ಬಗ್ಗೆ ಮಾರ್ಗದರ್ಶನ

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER 
ಶಿವಮೊಗ್ಗ: ಮಾರ್ಚ್ 28 ರಿಂದ ಏಪ್ರಿಲ್ 11ರ ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮಾರ್ಚ್ 7 ರಿಂದ 11 ವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆವರೆಗೆ ಆಕಾಶವಾಣಿ ಮೂಲಕ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಪ್ರಸಾರ ಭಾರತಿ ಆಕಾಶವಾಣಿ ಕೇಂದ್ರ, ಭದ್ರಾವತಿ ಇಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಡಿಡಿಪಿಐ ಎನ್.ಎಂ.ರಮೇಶ್ ತಿಳಿಸಿದ್ದಾರೆ.

READ | ಉಕ್ರೇನ್ ಟು ಬೆಂಗಳೂರು ಬಂದ ಸಾಗರದ ಯುವತಿ, ಸತತ ಆರು ದಿನಗಳ ಪ್ರವಾಸ

ಯಾವ ದಿನ ಯಾವ ವಿಷಯ?
ಮಾರ್ಚ್ 7 ರಂದು ದ್ವಿತೀಯ ಭಾಷೆ ಇಂಗ್ಲಿಷ್, ಮಾ.8ರಂದು ಗಣಿತ, ಮಾ.9ರಂದು ವಿಜ್ಞಾನ, ಮಾ.10ರಂದು ಸಮಾಜ ವಿಜ್ಞಾನ ಮತ್ತು ಮಾ.11ರಂದು ಪ್ರಥಮ ಭಾಷೆ ಕನ್ನಡ ಮತ್ತು ತೃತೀಯ ಭಾಷೆ ಹಿಂದಿ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡುವರು. ಎಲ್ಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

error: Content is protected !!