ಭದ್ರಾವತಿಯ ಮನೆಯೊಂದರಲ್ಲಿ ಲಕ್ಷಾಂತರ ರೂ. ದೋಚಿದ ಆರೋಪಿ ಅರೆಸ್ಟ್

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ರಬ್ಬರ್ ಕಾಡು ಗ್ರಾಮದ ಮನೆಯೊಂದರಲ್ಲಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ಲೂಟಿ ಮಾಡಿದ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ.

READ | Today Gold, Silver Rate, ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ, ಬಂಗಾರ, ಬೆಳ್ಳಿ ಮತ್ತೆ ಅಗ್ಗ

ರಬ್ಬರ್ ಕಾಡು ಗ್ರಾಮದ ಎಸ್.ಚೇತನ್ (27) ಬಂಧಿತ ಆರೋಪಿ. ಈತ ಜನವರಿ 13ರಂದು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ರಬ್ಬರ್ ಕಾಡು ಗ್ರಾಮದ ವಾಸಿಯೊಬ್ಬರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಕಳ್ಳತನ ಮಾಡಲಾಗಿತ್ತು.
ಮನೆಯ ಒಳಗಡೆ ಅಲ್ಮೆರಾದಲ್ಲಿ ಮನೆ ಕಟ್ಟುವ ಸಲುವಾಗಿ ತಂದಿಟ್ಟಿದ್ದ 6,00,000 ರೂಪಾಯಿ ನಗದು ಮತ್ತು ಅಂದಾಜು 5.66 ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು.

Paper twon ps
ಭದ್ರಾವತಿ ಪೇಪರ್ ಟೌನ್ ಪೊಲೀಸರು ವಶಕ್ಕೆ ಪಡೆದಿರುವ ಚಿನ್ನಾಭರಣ, ನಗದು.

ಚಿನ್ನಾಭರಣ, ನಗದು ವಶಕ್ಕೆ
ದೂರಿನನ್ವಯ ಐಪಿಸಿ ಕಲಂ 454, 380 ರೀತ್ಯಾ ಪ್ರಕರಣ ದಾಖಲಿಸಿ, ಪೇಪರ್ ಟೌನ್ ಪೊಲೀಸ್ ಠಾಣೆ ಪಿ.ಐ, ಪಿಎಸ್.ಐ ಹಾಗೂ ಸಿಬ್ಬಂದಿ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ. ಆರೋಪಿತನಿಂದ 5.60 ಲಕ್ಷ ರೂ. ನಗದು ಹಣ ಹಾಗೂ 6.43 ಲಕ್ಷ ರೂ. ಮೌಲ್ಯದ ಒಟ್ಟು 134.44 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

https://www.suddikanaja.com/2021/11/07/gaur-came-to-a-home-in-a-village/

error: Content is protected !!