ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒಕ್ಕಲಿಗರ ಸಂಘ ಆಗ್ರಹ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ ಹೆಚ್ಚಿನ ಸಂಖೆಯಲ್ಲಿರುವ ಒಕ್ಕಲಿಗರಿಗೆ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮ ರಚಿಸಿ, ಒಂದು ಸಾವಿರ ಕೋಟಿ ರೂ. ಮಂಜೂರು ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್ ಆಗ್ರಹಿಸಿದರು.
ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಒಕ್ಕಲಿಗ ಸಮುದಾಯ ಹಿಂದುಳಿದಿದೆ. ಶೇ.80ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಜತೆಗೆ, ಮೀಸಲಾತಿಯಲ್ಲೂ ಇತರೇ ಜಾತಿಯವರನ್ನು ಸೇರಿಸಿ ಶೇ.4ರಷ್ಟು ನೀಡಿದ್ದರಿಂದ ಅನ್ಯಾಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ನಿಗಮಗಳಿಗೆ ಸ್ವಾಗತ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರು ಮತ್ತು ಮರಾಠ ಸಮುದಾಯಕ್ಕೆ ನಿಗಮ ನೀಡಿರುವುದಕ್ಕೆ ಸ್ವಾಗತಿಸುತ್ತೇವೆ. ಜತೆಗೆ, ಶೀಘ್ರದಲ್ಲೇ ಮುಖ್ಯಮಂತ್ರಿಗಗಳಿಗೆ ಒಕ್ಕಲಿಗ ಸಮುದಾಯಕ್ಕೆ ನಿಗಮ ನೀಡುವ ಕುರಿತು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಸಕಾರಾತ್ಮಕ ಸ್ಪಂದನೆ ನೀಡುವ ಭರವಸೆ ಇದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಉಂಬ್ಳೆಬೈಲು ಮೋಹನ್, ಶ್ರೀಕಾಂತ್, ವನಮಾಲ, ಎನ್.ಎ.ಮಾದೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!