ಶಂಕರಮಠ ರಸ್ತೆಯಲ್ಲಿ‌ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಶಂಕರಮಠ ರಸ್ತೆಯಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನಿಂದಲೇ ಚಾಕು ಇರಿತಕ್ಕೆ ಒಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬಾಪೂಜಿನಗರದ ಪಾಚಾ ಖಾನ್ (40) ಮೃತ ವ್ಯಕ್ತಿ. ಮಾರ್ಚ್ 8ರ ರಾತ್ರಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದಾಗ ಬೈಕ್ ಅಡ್ಡಗಟ್ಟಿ ಆರ್.ಎಂ.ಎಲ್ ನಗರದ ಸೈಯದ್ ದಸ್ತಗೀರ್ ಎಂಬಾತ ಚಾಕು ಇರಿದಿದ್ದ. ತಕ್ಷಣ ಗಾಯಗೊಂಡಿದ್ದ ಪಾಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಚಾಕು ಇರಿದ 24 ಗಂಟೆಯಲ್ಲಿ ಅರೆಸ್ಟ್
ಪಾಚಾಗೆ ದಸ್ತಗೀರ್ ₹1 ಲಕ್ಷ ಸಾಲ ನೀಡಿದ್ದು, ವಾಪಸ್ ನೀಡಲು ಸತಾಯಿಸುತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಪಾಚಾಗೆ ಚಾಕು ಇರಿಯಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ದಸ್ತಗೀರ್ ನನ್ನು ಬಂಧಿಸಲಾಗಿತ್ತು. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!