ಶಿವಮೊಗ್ಗಕ್ಕೆ ಮತ್ತೊಂದು ಗರಿ, ರಾಷ್ಟ್ರದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಗಿರೀಶ್ ಗೆ 3ನೇ ಸ್ಥಾನ

 

 

ಸುದ್ದಿ ಕಣಜ.ಕಾಂ | KARNATAKA | EDUCATION CORNER
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ (kuvempu university) ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಜೆ.ಗಿರೀಶ್, ರಾಷ್ಟ್ರಮಟ್ಟದ ಮೆಕಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ನೂತನ ರ‌್ಯಾಂಕಿಂಗ್ ಪಟ್ಟಿಯಲ್ಲಿ ಪ್ರೊ.ಗಿರೀಶ್
2014ರಿಂದ ಈ ವಿಷಯಗಳ ಸಂಶೋಧನೆ ಕುರಿತಂತೆ ವಿಶ್ವಾಸಾರ್ಹ ದತ್ತಾಂಶ ನೀಡುತ್ತಾ ಬಂದಿರುವ ರಿಸರ್ಚ್ ಡಾಟ್ ಕಾಂ (research.com) ಹೊರತಂದಿರುವ ನೂತನ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
2021ರ ಡಿಸೆಂಬರ್ ತಿಂಗಳವರೆಗಿನ ಸಂಶೋಧನಾ ಪ್ರಕಟಣೆಗಳು ಮತ್ತು ಉಲ್ಲೇಖಗಳನ್ನೊಳಗೊಂಡ ಎಚ್ ಇಂಡೆಕ್ಸ್  (h index) ಆಧರಿಸಿ ರ‌್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ರಾಷ್ಟ್ರಮಟ್ಟದ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯ ವಿಜ್ಞಾನಿಯಾಗಿ ಗುರುತಿಸಿಕೊಂಡಿರುವ ಪ್ರೊ. ಬಿ.ಜೆ.ಗಿರೀಶ್ ಅವರ ಸಂಶೋಧನಾ ಕೊಡುಗೆ ಹೀಗೇ ಮುಂದುವರೆಯಲಿ ಮತ್ತು ಇತರ ಸಂಶೋಧಕರಿಗೆ ಸ್ಪೂರ್ತಿಯಾಗಲಿ ಎಂದು ಕುಲಪತಿ ಪ್ರೊ.ಬಿ ಪಿ ವೀರಭದ್ರಪ್ಪ ಹಾಗೂ ಕುಲಸಚಿವೆ ಜಿ.ಅನುರಾಧ ಹಾರೈಸಿದ್ದಾರೆ.

error: Content is protected !!