ಮಹಾವೀರ ವೃತ್ತದಲ್ಲಿ ಸಿಲಿಂಡರ್ ಗೆ ಮಾಲಾರ್ಪಣೆ!

 

 

ಸುದ್ದಿ ಕಣಜ.ಕಾಂ | CITY | POLITICAL NEWS
ಶಿವಮೊಗ್ಗ: ನಗರದ ಮಹಾವೀರ ವೃತ್ತದಲ್ಲಿ ಸಿಲಿಂಡರ್ ಗೆ ಮಾಲಾರ್ಪಣೆ ಮಾಡಿ, ಜಾಗಟೆ‌ ಬಾರಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ ಗುರುವಾರ ಪ್ರತಿಭಟನೆ ನಡೆಸಿತು.
ಇಂಧನ ಮತ್ತು ಅಡುಗೆ ಅನಿಲ ಬೆಲೆ ನಿರಂತರ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧವಾಗಿ ‘ಹಣದುಬ್ಬರ ಮುಕ್ತ ಭಾರತ’ ಅಭಿಯಾನ ಹೆಸರಿನಲ್ಲಿ ಪ್ರತಿಭಟನೆ ಮಾಡಲಾಯಿತು.
ಬೆಲೆ ಏರಿಕೆ‌ ನಿಯಂತ್ರಿಸುವಲ್ಲಿ ಬಿಜೆಪಿ‌ ನೇತೃತ್ವದ ಸರ್ಕಾರ ವಿಫಲವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವನ್ನು ರಾಷ್ಟ್ರಪತಿಗಳು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

READ | ಸತತ ಇಂಧನ ಬೆಲೆ ಏರಿಕೆ, ಶಿವಮೊಗ್ಗದಲ್ಲಿ ಪೆಟ್ರೋಲ್ , ಪವರ್ ಪೆಟ್ರೋಲ್,ಡೀಸಲ್ ಬೆಲೆ ಇಂದು ಎಷ್ಟಿದೆ

ಸರ್ಕಾರವನ್ನು ಎಚ್ಚರಿಸುವ ಕೆಲಸ
ಈ ವೇಳೆ ಮಾತನಾಡಿದ‌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ‘ಜಾಗಟೆ ಗಂಟೆ ಬಾರಿಸುವ ಮೂಲಕ ಕಿವುಡುತನ ತೋರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಈಗಾಗಲೇ ಜನ ಕೋವಿಡ್ ನಿಂದಾಗಿ ಸಂಕಷ್ಟದಲ್ಲಿದ್ದಾರೆ. ಲಾಕ್ ಡೌನ್ ನಿಂದಾಗಿ ಆದಾಯವೇ‌ ಇಲ್ಲದಂತಾಗಿದೆ. ಈ ಸಂದರ್ಭದಲ್ಲಿ ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್.ಸಿ ಆರ್.ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಪಾಲಿಕೆ ಸದಸ್ಯ ಯೋಗೇಶ್, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಮಹಮ್ಮದ್ ನಿಹಾಲ್, ಸಿ.ಎಸ್.ಚಂದ್ರಭೂಪಾಲ್, ಸಿ.ಜಿ.ಮಧುಸೂದನ್, ಚೇತನ್, ರಾಮೇಗೌಡ ಭಾಗವಹಿಸಿದ್ದರು.

READ | ಶಿವಮೊಗ್ಗದ ಇಂದಿನ ಟಾಪ್ 14 ನ್ಯೂಸ್

error: Content is protected !!