ರೈಲ್ವೆ ಸೀಸನ್ ಟಿಕೆಟ್ ಪುನರಾರಂಭ, ಯಾವಾಗಿಂತ ವಿತರಣೆ, ಅವಧಿ ಮುಗಿದ ಟಿಕೆಟ್ ಹೊಂದಿದವರಿಗೆ ಗುಡ್ ನ್ಯೂಸ್

 

 

ಸುದ್ದಿ ಕಣಜ.ಕಾಂ | KARNATAKA | RAILWAY
ಶಿವಮೊಗ್ಗ: ಕಳೆದ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಕೊರೊನಾ ಸಾಂಕ್ರಾಮಿಕ ಹರಡುವಿಕೆ ತಡೆಯಲು ನಿರ್ಬಂಧಗಳನ್ನು ಹೇರಿದ ನಂತರ ಭಾರತೀಯ ರೈಲ್ವೆಯಲ್ಲಿ ಸೀಸನ್ ಟಿಕೆಟ್ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಪುನರಾರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಈಗ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ. ಹೀಗಾಗಿ, ರೈಲ್ವೆ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೆಟ್ ಕೌಂಟರ್ ಗಳಲ್ಲಿ ಮತ್ತು UTSONMOBILE ಆ್ಯಪ್‌ ನಲ್ಲಿ ಪ್ರಯಾಣಿಕರಿಗೆ ಮಾಸಿಕ ಸೀಸನ್ ಟಿಕೆಟ್‌ ಗಳ ಸೌಲಭ್ಯವನ್ನು ಆಗಸ್ಟ್ 3ರಿಂದ ಪುನರಾರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

READ | ರಾಜ್ಯ ಸಂಪುಟದಲ್ಲಿ ಯಾರಿಗೆ ಎಂಟ್ರಿ, ಯಾರಿಗೆ ಎಕ್ಸಿಟ್

ಪ್ರಯಾಣಿಕರ ಅ‌ನುಕೂಲಕ್ಕಾಗಿ ಟಿಕೆಟ್ ಕಾಲಾವಧಿ ವಿಸ್ತರಣೆ
ಲಾಕ್ ಡೌನ್ ನಿರ್ಬಂಧಗಳನ್ನು ಅನುಸರಿಸಲು ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ 23ನೇ ಮಾರ್ಚ್ 2020ರ ಮೊದಲು ನೀಡಲಾದ ಮಾನ್ಯ ಸೀಸನ್ ಟಿಕೆಟ್ ಹೊಂದಿದ್ದರೂ ಪ್ರಯಾಣ ಮಾಡುವ ಹಲವಾರು ದಿನಗಳ ಅವಕಾಶವನ್ನು ಪ್ರಯಾಣಿಕರು‌ ಕಳೆದುಕೊಂಡಿದ್ದಾರೆ. ಅಂತಹ ಸೀಸನ್ ಟಿಕೆಟ್‌ ನ ಕಾಲಮಿತಿಯನ್ನು ಕಳೆದುಕೊಂಡ ದಿನಗಳಿಗೆ ಅನುಸಾರವಾಗಿ ವಿಸ್ತರಿಸಲು ನಿರ್ಧರಿಸಲಾಗಿದೆ. ಆಗಸ್ಟ್ 9 ರಿಂದ ಯುಟಿಎಸ್ ಕೌಂಟರ್‌ಗಳಲ್ಲಿ ಉಳಿದ ದಿನಗಳಿಗೆ ತತ್ಸಮಾನವಾಗಿ ಸಕ್ರಿಯಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

READ | ಕೋವಿಡ್ ಮೂರನೇ ಅಲೆ, ಶಿವಮೊಗ್ಗದಲ್ಲಿ ಹೊಸ ಗೈಡ್‍ಲೈನ್ಸ್ ಬಿಡುಗಡೆ, ಏನೇನು ಕಂಡಿಷನ್, ಯಾವುದರ ಮೇಲೆ ನಿರ್ಬಂಧ?

ಮುಂಚಿನಂತೆಯೇ ಪ್ರಯಾಣ ಸೇವೆ
ಹಿಂದಿನಂತೆಯೇ ಸೀಸನ್ ಟಿಕೆಟ್ ಹೊಂದಿರುವವರಿಗೆ, ರೈಲುಗಳಲ್ಲಿ ಮತ್ತು ರೈಲ್ವೇ ಆವರಣದಲ್ಲಿ ಸೂಚಿತ ವ್ಯಕ್ತಿಗತ ದೂರ ಮಾರ್ಗಸೂಚಿಗಳು ಮತ್ತು ನೈರ್ಮಲ್ಯ ನಿಯಮಗಳನ್ನು ಸರಿಯಾಗಿ ಅನುಸರಿಸುವುದರೊಂದಿಗೆ, ಕಾಯ್ದಿರಿಸದ ರೈಲುಗಳು ಮತ್ತು ಕಾಯ್ದಿರಿಸದ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುವುದು. ಸಾರ್ವಜನಿಕರ ಇದರ‌ಪ್ರಯೋಜನ ಪೆಯಬೇಕು ಎಂದು ತಿಳಿಸಿದ್ದಾರೆ.

https://www.suddikanaja.com/2021/04/15/3-crores-loss-to-ksrtc-shivamogga-division-due-to-employees-strike/

error: Content is protected !!