ಎಂ ಸ್ಯಾಂಡ್ ವ್ಯಾಪಾರಿ ಕೊಲೆ ಮಾಡಿದ ಆರೋಪಿ ಅರೆಸ್ಟ್

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಪಿಂಗಾರ ಬಾರ್ ಮುಂದೆ ಎಂ ಸ್ಯಾಂಡ್ ವ್ಯಾಪಾರಿಯೊಬ್ಬರಿಗೆ ಇಟ್ಟಿಗೆಯಿಂದ ಶುಕ್ರವಾರ ರಾತ್ರಿ ಹೊಡೆದು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ.

READ | 5ಜಿ ಟಾವರ್ ಸ್ಥಾಪನೆ ಅಗ್ರಿಮೆಂಟ್ ಕಳುಹಿಸಿ ಲಕ್ಷಾಂತರ ರೂ. ಮೋಸ

ರಾಜೀವ್ ಗಾಂಧಿ ಬಡಾವಣೆಯ ಪರಶುರಾಮ್ ಬಂಧಿತ. ಈತ ತುಂಗಾನಗರದ ನಿವಾಸಿ ಚಂದ್ರಶೇಖರ್ (30) ಎಂಬಾತನನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿದ್ದ. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಮನಸ್ಥಾಪವಾಗಿತ್ತು. ಈ ವೈಷಮ್ಯ ಹಿನ್ನೆಲೆ ಪರಶುರಾಮ್ ಅವರು ಕೊಲೆ ಮಾಡಿದ್ದಾರೆ.
ಆ ರಾತ್ರಿ ನಡೆದಿದ್ದೇನು?
ಚಂದ್ರಶೇಖರ್ ಅವರು ಭಾವ ನರಸಿಂಹಲು ಅವರೊಂದಿಗೆ ಶಿವಪ್ಪನಾಯಕ ಮಾಲ್ ಗೆ ಬಂದಿದ್ದಾರೆ. ನಂತರ, ಭಾವ ಮನೆಗೆ ತೆರಳಿದ್ದಾರೆ. ಸ್ಚಲ್ಪ‌ಹೊತ್ತಲ್ಲೇ ಚಂದ್ರಶೇಖರ್ ಕೂಡ ಬಸ್ ನಿಲ್ದಾಣ ಕಡೆಗೆ ಹೋಗಿದ್ದಾರೆ. ಆಗ ಪರಶುರಾಮ್ ಅವರು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಚಂದ್ರಶೇಖರ್ ಓಡಿಹೋಗಲು ಯತ್ನಿಸಿದ್ದಾರೆ.‌ ಓಡಾವಾಗ ನೆಲಕ್ಕೆ‌ ಬಿದ್ದಿದ್ದೇ ಇಟ್ಟಿಗೆಯನ್ನು ತಲೆಯ ಮೇಲೆ ಹಾಕಿ ಕೊಲೆ‌ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!