ಶಿವಮೊಗ್ಗ, ದಾವಣಗೆರೆಯಲ್ಲಿ ಬೈಕ್ ಕಳವು ಮಾಡಿದ ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಬೈಕ್ ಸೀಜ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರ ಸೇರಿದಂತೆ ವಿವಿಧೆಡೆ ಬೈಕ್‌ ಕಳ್ಳತನ ಮಾಡಿದ‌ ಆರೋಪಿಯನ್ನು ಸೋಮವಾರ‌ ಬಂಧಿಸಲಾಗಿದೆ.
ಹೊಳೆಹೊನ್ನೂರಿನ‌ ಕಲ್ಲಿಹಾಳ್ ಸರ್ಕಲ್‌ ಶಫೀವುಲ್ಲಾ ಅಲಿಯಾಸ್ ರೋಹಿತ್(26) ಬಂಧಿತ‌ ಆರೋಪಿ.
₹1.77 ಲಕ್ಷ ಮೌಲ್ಯದ‌‌ ಐದು ಬೈಕ್‌ ಸೀಜ್
ಬಾಪೂಜಿ ನಗರದ ವಾಸಿಯೊಬ್ಬರು ಶಂಕರಮಠ ಸರ್ಕಲ್ ಹತ್ತಿರ ಮಧ್ಯಾಹ್ನ‌ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ನಿಲ್ಲಿಸಿ ಅಂಗಡಿಗೆ ಹೋಗಿದ್ದು, ಹಿಂದಿರುಗಿ ಬಂದು ನೋಡಿದಾಗ ಯಾರೋ ಕಳ್ಳರು ಬೈಕನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದರು.

READ | ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಚಿವ ಈಶ್ವರಪ್ಪ ತುರ್ತು ಮಾಧ್ಯಮಗೋಷ್ಠಿ, ಅವರು ಹೇಳಿದ್ದೇನು, ಇಲ್ಲಿವೆ ಟಾಪ್ ಪಾಯಿಂಟ್ಸ್

ಕೋಟೆ ಪೊಲೀಸ್ ಠಾಣೆ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿ ತಂಡವು ಪ್ರಕರಣದ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕೋಟೆ ಠಾಣೆ‌ ವ್ಯಾಪ್ತಿಯ‌ 4 ಮತ್ತು ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸ್ ಠಾಣೆ 1 ಪ್ರಕರಣ ಸೇರಿದಂತೆ ಒಟ್ಟು 5 ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ ₹1,77,000 ಒಟ್ಟು ಐದಯ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

error: Content is protected !!