ಪಿಎಸ್‍ಐ ನೇಮಕಾತಿ ಅವ್ಯವಹಾರ ವಿರುದ್ಧ ವಿನೂತನ ಪ್ರತಿಭಟನೆ

 

 

ಸುದ್ದಿ ಕಣಜ.ಕಾಂ | DISTRICT | PSI SCAM
ಶಿವಮೊಗ್ಗ: ಪಿ.ಎಸ್.ಐ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರದ (PSI SCAM )ವಿರುದ್ಧ ಎನ್.ಎಸ್.ಯು.ಐ (NSUI) ವಿನೂತನವಾಗಿ ಪ್ರತಿಭಟನೆ ನಡೆಸಿದೆ.
ನಗರದ ಮಹಾವೀರ ವೃತ್ತದಲ್ಲಿ ಗುರುವಾರ ಪೊಲೀಸ್ ಸಮವಸ್ತ್ರ, ನಕಲಿ ನೋಟು, ಸಚಿವ ಅಶ್ವತ್ಥ್ ನಾರಾಯಣ ಅವರ ಮುಖವಾಡ ಧರಿಸಿ ಸೂಟ್ ಕೇಸ್ ಪ್ರದರ್ಶಿಸಿ ಲಂಚ ಪಡೆಯುವ ಅಣಕು ಪ್ರದರ್ಶನ ಮಾಡಿದರು.

READ | ಶಿವಮೊಗ್ಗದಲ್ಲಿ ಇಂದಿನಿಂದ ‘ಪುನೀತ್ ರಾಜಕುಮಾರ್ ಕಪ್’ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿ, ವಿವಿಧ ರಾಜ್ಯಗಳ ತಂಡಗಳು ಭಾಗಿ

ರಾಜ್ಯ ಸರ್ಕಾರ ನಡೆಸಿದ 545 ಪಿ.ಎಸ್.ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಬೆಳಕಿಗೆ ಬಂದಿದೆ. ಇದರಲ್ಲಿ ಉನ್ನತ ಶಿಕ್ಷಣ ಸಚಿವರ ಸಂಬಂಧಿ ಭಾಗಿಯಾಗಿರುವುದರಿಂದ ಕೂಡಲೇ ಸಚಿವರನ್ನು ಸಚಿವ ಸ್ಥಾನದಿದ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಚರಣ್, ಹರ್ಷಿತ್, ಎಸ್.ಎನ್. ವಿಜಯಕುಮಾರ್, ರವಿ, ಸಂಜಯ್, ವಿಶಾಲ್, ಸುಹಾಸ್, ವೆಂಕಟೇಶ್, ಸಂದೀಪ್, ತೌಫಿಕ್, ಮಧುಸೂದನ್, ಕೆ. ಚೇತನ್, ಜಿ.ಡಿ. ಮಂಜುನಾಥ್, ಶಿವು, ಅಬ್ದುಲ್ ಸತ್ತಾರ್, ಚಂದ್ರೋಜಿರಾವ್ ಉಪಸ್ಥಿತರಿದ್ದರು.

error: Content is protected !!