ಬಡಬಡಿಸುವ ಕಾಂಗ್ರೆಸಿಗರಿಗೆ ಅಭಿವೃದ್ಧಿ ಬಗ್ಗೆ ಗೊತ್ತಿಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೈಲ್ವೆ ಕ್ಷೇತ್ರದಲ್ಲಿ ಆಗುತ್ತಿರುವ ಕೆಲಸಗಳನ್ನು ಕಾಂಗ್ರೆಸಿಗರು ನೋಡಲಿ. ಅದನ್ನು ಬಿಟ್ಟು ಸುಮ್ಮನೇ ಬಡಬಡಿಸುವುದು ಸರಿಯಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಗರಂ ಆದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರೈಲ್ವೆ ಕೋಚಿಂಗ್ ಟರ್ಮಿನಲ್ ಅನ್ನು ಕೋಟೆಗಂಗೂರಿಗೆ ಸ್ಥಳಾಂತರಿಸಿದ್ದಕ್ಕೆ ತೀ.ನಾ.ಶ್ರೀನಿವಾಸ್ ಅವರು ಮಾಡಿದ ಆರೋಪ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ನವರಿಗೆ ಆರೋಪಿಸುವುದು ಬಿಟ್ಟು ಬೇರೆಯ ಕೆಲಸವೇ ಇಲ್ಲ ಎಂದು ಹೇಳಿದರು.
ಭೂಮಾಫಿಯಾನೂ ಇಲ್ಲ ಏನೂ ಇಲ್ಲ: ರೈಲ್ವೆ ಕೋಚಿಂಗ್ ಟರ್ಮಿನಲ್ ಸ್ಥಳ ಬದಲಾವಣೆಯ ಹಿಂದೆ ಭೂ ಮಾಫಿಯಾ ಕೈವಾಡದ ಬಗ್ಗೆ ಆರೋಪಿಸಿರುವದರಲ್ಲಿ ಅರ್ಥವೇ ಇಲ್ಲ. ರೈಲ್ವೆ ಇಲಾಖೆ ಜಾಗ ಗುರುತಿಸಿದೆ. ಈ ಸಂಬಂಧ ಅಧಿಕಾರಿಗಳು ವರದಿ ಕೂಡ ನೀಡಿದ್ದಾರೆ.
ಕೋಟೆಗಂಗೂರು ಜಿಲ್ಲೆ ಬಿಟ್ಟು ಬೇರೆಡೆ ಇಲ್ಲ. ಸಾಗರ ಕೂಡ ನನ್ನ ಕ್ಷೇತ್ರಕ್ಕೆ ಒಳಪಡುತ್ತದೆ. ರೈಲ್ವೆ ಕೋಚಿಂಗ್ ಟರ್ಮಿನಲ್ ಕೇವಲ ಶಿವಮೊಗ್ಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ರಾಜ್ಯದ ರೈಲ್ವೆ ಸೇವೆಗೆ ಪೂರಕವಾಗಲಿದೆ ಎಂದರು.

ಕಾಂಗ್ರೆಸ್ ಮುಖಂಡ ತೀ.ನಾ.ಶ್ರೀನಿವಾಸ್ ಆರೋಪಗಳೇನು? ಕ್ಕಿಕ್ ಮಾಡಿ

error: Content is protected !!