ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಎರಡು ದಿನ ಸುರಿದ ಧಾರಾಕಾರ ಮಳೆಗೆ ಅಂದಾಜು ₹40 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ನೆರೆ ವೀಕ್ಷಣೆ ಬಳಿಕ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕಾಲಿಕ ಹಾಗೂ ಒಂದೇ ದಿನ ದಾಖಲೆಯ ಮಳೆ ಸುರಿದಿರುವುದರಿಂದ ಮನೆ 24 ಶಾಲೆ ಕಟ್ಟಡ, 17 ಅಂಗನವಾಡಿ, 2,500 ಹೆಕ್ಟೇರ್ ಮೆಕ್ಕೆಜೋಳ ಹಾಗೂ 500 ಎಕರೆ ಭತ್ತಕ್ಕೆ ಹಾನಿಯಾಗಿದೆ. ಹಾನಿಯ ಪ್ರಮಾಣದ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
VIDEO REPORT
ಪ್ರತಿ ಸಲ ಮಳೆಗೆ ಶಿವಮೊಗ್ಗ ನಗರ ಪಗರದೇಶದಲ್ಲಿ ನಿರಂತರ ಸಮಸ್ಯೆ ಅಗುತ್ತಲೇ ಇದೆ. ಈ ವಿಚಾರದ ಬಗ್ಗೆ ಚರ್ಚಿಸಿ, ವರದಿ ಪಡೆಯಲಾಗುವುದು. ಅದರ ಕಾರಣವನ್ನು ಪತ್ತೆ ಹಚ್ಚಿ ಶಾಶ್ವತ ಪರಿಹಾರ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೆಕ್ಕೆಜೋಳಕ್ಕೂ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು.
– ಬಿ.ವೈ.ರಾಘವೇಂದ್ರ, ಸಂಸದ
ಕ್ಯಾಬಿನೆಟ್ ಗೆ ವರದಿ ಸಲ್ಲಿಕೆ
ಜಿಲ್ಲೆಯಲ್ಲಿ ನೆರೆಯಿಂದಾದ ಹಾನಿಗಾಗಿ ರೈತರಿಗೆ ಎಕರೆಗೆ ₹13,000 ಕ್ಕೂ ಅಧಿಕ ಪರಿಹಾರ ನೀಡಲು ಸರ್ಕಾರ ಚರ್ಚೆ ನಡೆಸುತ್ತಿದೆ. ಅಧಿಕಾರಿಗಳ ಸಭೆ ಕರೆದಿದ್ದು, ಮಾಹಿತಿಯನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು.
READ | ಫ್ರೀಡಂ ಪಾರ್ಕ್‍ನಲ್ಲಿ ರಾಶಿ ರಾಶಿ ಮದ್ಯದ ಬಾಟಲಿ!
ತೀರ್ಥಹಳ್ಳಿಯಲ್ಲಿ ಒಬ್ಬರು ಮೃತಪಟ್ಟಿದ್ದು ಅವರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಲಾಗಿದೆ. ನಷ್ಟವಾದವರೆಲ್ಲರಿಗೂ ಶೀಘ್ರ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಮೇಯರ್ ಸುನೀತಾ ಅಣ್ಣಪ್ಪ, ಡಿಸಿ ಡಾ.ಆರ್.ಸೆಲ್ವಮಣಿ, ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ್ ವಟಾರೆ ಹಲವರು ಉಪಸ್ಥಿತರಿದ್ದರು.
https://suddikanaja.com/2022/01/25/rdpr-minister-ks-eshwarappa-and-home-minister-aarga-jnanendra-responded-to-the-media-on-tuesday-on-changing-district-in-charge/