ಶಿವಮೊಗ್ಗದಲ್ಲಿ ಯುವತಿಯರಿಗೆ ಮೇಕಪ್ ತರಬೇತಿ, ಸ್ವಯಂ ಉದ್ಯೋಗಕ್ಕೆ ಅವಕಾಶ

makeup

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಅಶ್ವಿನಿ ಮೇಕೋವರ್ ಮತ್ತು ಬ್ಯೂಟಿಪಾರ್ಲರ್ ಸಂಸ್ಥೆ ವತಿಯಿಂದ ನಗರದಲ್ಲಿ ಅತಿ ಕಡಿಮೆ ದರದಲ್ಲಿ ಯುವತಿಯರಿಗೆ ಮೇಕಪ್ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಮಾಲೀಕರಾದ ಎಸ್.ಎಂ. ಅಶ್ವಿನಿ ಹೇಳಿದರು.

makeup 1ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮಹಿಳೆಯರ ಸ್ವಾವಲಂಬನೆಗೆ ಬ್ಯೂಟಿಪಾರ್ಲರ್ ಕೋರ್ಸ್ ಸಹಕಾರಿಯಾಗಲಿದೆ. ಪ್ರಸ್ತುತ ಮೇಕಪ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಒಂದು ತಿಂಗಳ ಕೋರ್ಸ್
ಸಂಸ್ಥೆಯು ಮಹಿಳೆಯರಿಗಾಗಿ ಜೂನ್ 20ರಿಂದ ಕೋರ್ಸ್ ಆರಂಭಿಸಲಿದೆ. ಒಂದು ತಿಂಗಳ ಕೋರ್ಸ್ ಆಗಿದೆ. ಬೆಂಗಳೂರು ಮತ್ತಿತರ ಬೃಹತ್ ನಗರಗಳಲ್ಲಿ ಈ ಕೋರ್ಸ್ ಗೆ ಲಕ್ಷಾಂತರ ಹಣ ಪಾವತಿಸಬೇಕು. ಆದರೆ, ಶಿವಮೊಗ್ಗದಲ್ಲಿ ಕಡಿಮೆ ದರದದಲ್ಲಿ ತರಬೇತಿ ನೀಡುತಿದ್ದ, ಮಧ್ಯಮ ಮತ್ತು ಬಡವರ್ಗದವರಿಗೆ ಪ್ರಯೋಜನವಾಗಲಿದೆ ಎಂದರು.
ಎಲ್ಲಿ ತರಬೇತಿ, ಇವರಿಗೆ ಸಂಪರ್ಕಿಸಿ
ಲಕ್ಷ್ಮೀ ಟಾಕೀಸ್ ಸರ್ಕಲ್ ಬಳಿಯ ಲಕ್ಷ್ಮೀ ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಮಾಹಿತಿ ಮತ್ತು ನೋಂದಣಿಗಾಗಿ ಮೊಬೈಲ್ ಸಂಖ್ಯೆ 9901216093ಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ. ಸಂಸ್ಥೆಯ ಉಪಾಧ್ಯಕ್ಷೆ ಶೀಲಾ ಇದ್ದರು.

https://suddikanaja.com/2021/11/21/good-auto-accident-to-girls/

Leave a Reply

Your email address will not be published. Required fields are marked *

error: Content is protected !!