2023ರಲ್ಲಿ ನಾನೇ ಸಿಎಂ, ಭವಿಷ್ಯ ನುಡಿದ ಎಚ್.ಡಿ.ಕುಮಾರಸ್ವಾಮಿ

HD Kumarswamy JDS

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: 2023ನೇ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯುವುದಕ್ಕೆ ಹಲವು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಎಷ್ಟೇ ಜನ ಪಕ್ಷ ಬಿಟ್ಟರೂ ಜೆಡಿಎಸ್ ಸ್ಥಿರವಾಗಿರಲಿದೆ. ಮುಂಬರುವ ಎಲೆಕ್ಷನ್ ನಲ್ಲಿ ಪೂರ್ಣ ಬಹುಮತದೊಂದಿಗೆ ನಾನೇ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದೈವಾನುಗ್ರಹವಿದೆ. ಜನರ ಸೇವೆಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಪೂರ್ಣ ವಿಶ್ವಾಸ ನನಗಿದೆ. ಅದಕ್ಕಾಗಿ, ಮತದಾರರು ಬೆಂಬಲಿಸಬೇಕು. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಮುಂದಾಗುವುದಿಲ್ಲ. ಬರುವ ಚುನಾವಣೆಗಾಗಿ ಪಂಚರತ್ನ ರಥಯಾತ್ರೆ ಹಾಗೂ ಮಿಷ್ನ 123 ಮಾಡಲಾಗುವುದು ಎಂದರು.

READ | ಕಮೀಷನ್ ದಂಧೆಯ ಹಿಂದಿದೆ RSS, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ‌ ಆರೋಪ

ಮಹಾರಾಷ್ಟ್ರದಲ್ಲಿ‌ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ಕೆ, ಇದರ ಹಿಂದೆ ರಾಜ್ಯ ಬಿಜೆಪಿಯವರ ಕೈವಾಡವಿಲ್ಲ. ಬದಲಿಗೆ, ಆಪರೇಷನ್ ಮಾಡುವಲ್ಲಿ ಪರಿಣಿತಿ ಹೊಂದಿರುವ ಅಮೀತ್ ಶಾ ಅವರ ಕೈವಾಡವಿದೆ. ಅಂದು ಕರ್ನಾಟಕದಲ್ಲಿ ನಡೆದ ಆಪರೇಷನ್ ಈಗ ಮಹಾರಾಷ್ಟ್ರದಲ್ಲಿ‌ ನಡೆದಿದೆ. ಕರುನಾಡಿನವರು ಶಾಂತಿಪ್ರಿಯರು‌ ರೊಚ್ಚಿಗೆದ್ದಿರಲಿಲ್ಲ. ಆದರೆಣ ಮಹಾರಾಷ್ಟ್ರದಲ್ಲಿ ಶಿವಸೇನೆಯವರು ಬಂಡಾಯ ಹೋಗಿರುವ ಶಾಸಕರ ಕಚೇರಿ ಧ್ವಂಸ ಮಾಡುತಿದ್ದಾರೆ ಎಂದರು‌.

https://suddikanaja.com/2021/09/11/kodihalli-swamiji-predictions-about-two-years/

Leave a Reply

Your email address will not be published. Required fields are marked *

error: Content is protected !!