ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಲಕ್ಕಿನಕೊಪ್ಪ ಕ್ರಾಸ್ ನ ತೋಟದ ಕೆರೆಯ ಹತ್ತಿರ ಎರಡು ಬಸ್ ಗಳ ನಡುವೆ ಶುಕ್ರವಾರ ಸಂಜೆ ಭೀಕರ ಅಪಘಾತ ಸಂಭವಿಸಿದ್ದು, 40 ಜನ ಪ್ರಯಾಣಿಕರು ಗಾಯಗೊಂಡಿದ್ದು, ಡ್ರೈವರ್ ಸ್ಥಿತಿ ಗಂಭೀರವಾಗಿದೆ.
READ | ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಲ್ಲಿ ಇನ್ಮುಂದೆ ಆನೆ ಸವಾರಿಯೊಂದಿಗೆ ಬೋಟಿಂಗ್ ಮಜಾ
ಶೃಂಗೇರಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ಹಾಗೂ ಲಕ್ಕಿನಕೊಪ್ಪ ಕ್ರಾಸ್ ನ ತೋಟದ ಕೆರೆಯ ಹತ್ತಿರ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ
ಬಸ್ ಮತ್ತು ಶಿವಮೊಗ್ಗದಿಂದ ಕೊಪ್ಪಕ್ಕೆ ಹೋಗುತ್ತಿದ್ದ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾದ ಪರಿಣಾಮ ಕೆಎಸ್.ಆರ್.ಟಿಸಿ. ಬಸ್ ಚಾಲಕ ಮಲ್ಲೇಶ್ ಮತ್ತು ಖಾಸಗಿ ಬಸ್ ಚಾಲಕ ಶ್ರೀಧರ್ ಭಟ್ ಅವರಿಗೂ ಗಾಯಗಳಾಗಿವೆ. ಖಾಸಗಿ ಬಸ್ ಚಾಲಕ ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಗಾಯಾಳುಗಳನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.