ಶಿವಮೊಗ್ಗದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Rain

 

 

ಸುದ್ದಿ ಕಣಜ.ಕಾಂ | KARNATAKA | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯು ಧಾರಾಕಾರವಾಗಿ ಸುರಿಯುತ್ತಿದ್ದು, ಇನ್ನೂ ಐದು ದಿನಗಳ ಕಾಲ ವರ್ಷಧಾರೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

READ | ಲಿಂಗನಮಕ್ಕಿ‌ ಜಲಾಶಯದಲ್ಲಿ 5 ಅಡಿ ನೀರು ಏರಿಕೆ, ಯಾವ ಡ್ಯಾಂನಲ್ಲಿ‌ ಎಷ್ಟು ನೀರಿದೆ? 

ಮುನ್ಸೂಚನೆ (forecast)ಯಲ್ಲಿ ತಿಳಿಸಿರುವಂತೆ ಜುಲೈ 7ರಿಂದ 15ರವರೆಗೆ ಮಳೆಯಾಗಲಿದೆ. ಅದರಲ್ಲೂ ಜು.8ರಂದು ಭಾರಿ ಪ್ರಮಾಣದ ಮಳೆಯಾಗುವುದಾಗಿ ತಿಳಿಸಲಾಗಿದೆ. ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 115.6 ರಿಂದ 204.4 ಎಂಎಂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ.
ಈಗಾಗಲೇ ತುಂಗಾ ನದಿ ಮೈದುಂಬಿ ಹರಿಯಲಿದ್ದು, ಮಂಟಪ ಮುಳುಗುವ ಹಂತದಲ್ಲಿದೆ. ಇದೇ ರೀತಿ ಮಳೆ ಮುಂದುವರಿದರೆ ನೆರೆ ಸೃಷ್ಟಿಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!