ಇಂದಿನಿಂದ ದುಬಾರಿ ದುನಿಯಾ, ಮೊಸರು, ಮಾಂಸ, ಚೆಕ್ ವಿತರಣೆಗೂ ಬೀಳಲಿದೆ ಟ್ಯಾಕ್ಸ್, ಯಾವುದಕ್ಕೆಲ್ಲ ತೆರಿಗೆ?

GST

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಜುಲೈ 18ರಿಂದ ದುಬಾರಿ ದುನಿಯಾ ಆರಂಭವಾಗಲಿದೆ. ಇದಕ್ಕೆ ಕಾರಣ, ಸರಕು ಮತ್ತು ಸೇವಾ ತೆರಿಗೆ(Goods and Service Tax-GST) ಹೇರಿಕೆ. ಕೆಲವು ವಸ್ತುಗಳಿಗೆ ಶೇ.5, ಶೇ.12ರಿಂದ 18ಕ್ಕೆ ತೆರಿಗೆ ಏರಿಕೆ ಮಾಡಲಾಗಿದೆ.
ದಿನಬಳಕೆ ವಸ್ತುಗಳ ಬೆಲೆಯು ಸೋಮವಾರದಿಂದ ದುಬಾರಿಯಾಗಲಿದ್ದು, ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಬೀಳಲಿದೆ.

READ | ಶಾಲೆಗಳಿಗೆ ಜಲದಿಗ್ಬಂಧನ, ಊರುಗಳಿಗೆ ರಸ್ತೆ ಕಟ್, ಶಿವಮೊಗ್ಗದಲ್ಲಿ ಮಳೆ ಅನಾಹುತ 

ಯಾವುದಕ್ಕೆ ಎಷ್ಟು ಜಿ.ಎಸ್.ಟಿ.?
ಶೇ.5ರಷ್ಟು ಜಿ.ಎಸ್.ಟಿ | ಮಾಂಸ (ಹೆಪ್ಪುಗಟ್ಟಿದ ಹೊರತುಪಡಿಸಿ), ಮೀನು, ಮೊಸರು, ಪನೀರ್, ಜೇನುತುಪ್ಪ, ಒಣಗಿದ ದ್ವಿದಳ ಧಾನ್ಯದ ತರಕಾರಿಗಳು, ಗೋಧಿ/ ಮೆಸ್ಲಿನ್ ಹಿಟ್ಟು, ಬೆಲ್ಲ, ಮಂಡಕ್ಕಿ, ಸಾವಯವ ಗೊಬ್ಬರ, ತೆಂಗಿನ ನಾರಿನ ಕಾಂಪೋಸ್ಟ್ ಇತರೆ ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತಿದೆ. ಒಂದುವೇಳೆ, ಮೊದಲೇ ಪ್ಯಾಕ್ ಮಾಡಿದ ಪೊಟ್ಟಣಗಳಿದ್ದರೂ ಅದಕ್ಕೂ ಈ ನಿಯಮ ಅನ್ವಯವಾಗಲಿದೆ.
ಐಸಿಯು ಹೊರತುಪಡಿಸಿದಂತೆ ಆಸ್ಪತ್ರೆಗಳಲ್ಲಿ ದಿನದ ಬಾಡಿಗೆ 5,000 ರೂಪಾಯಿ ಮೀರಿದ ಕೊಠಡಿಗಳಿಗೂ ತೆರಿಗೆ ಅನ್ವಯವಾಗಲಿದೆ.
ಶೇ.18 ಜಿ.ಎಸ್.ಟಿ | ಚೆಕ್ ಗಳ ವಿತರಣೆಗೆ (ಸಡಿಲ ಅಥವಾ ಪುಸ್ತಕ ರೂಪ) ಬ್ಯಾಂಕ್ ವಿಧಿಸುವ ಶುಲ್ಕದ ಮೇಲೆ ತೆರಿಗೆ ಹೊರೆ ಬೀಳಲಿದೆ.
ಎಲ್.ಇ.ಡಿ. ಲೈಟ್ ಗಳು, ಫಿಕ್ಚರ್ ಗಳು, ಎಲ್.ಇ.ಡಿ. ಲ್ಯಾಂಪ್, ಬ್ಲೇಡ್ ಹೊಂದಿರುವ ಕತ್ತರಿ, ಪೇಪರ್ ಚಾಕು, ಪೆನ್ಸಿಲ್ ಶಾರ್ಪನರ್, ಬ್ಲೇಡ್, ಚಮಚ, ಪೋರ್ಕ್, ಏಣಿ, ಸ್ಕಿಮ್ಮರ್, ಸರ್ವರ್ ಗಳ ಮೇಲೆ ಜಿ.ಎಸ್.ಟಿ.ಯು ಶೇ.12ರಿಂದ 18ಕ್ಕೆ ಹೆಚ್ಚಲಿದೆ.
ನೀರು ಎತ್ತುವ ಪಂಪ್, ಆಳವಾದ ಕೊಳವೆ ಬಾವಿಗೆ ಅಳವಡಿಸುವ ಟರ್ಬೈನ್ ಪಂಪ್, ಸಬ್ ಮರ್ಸಿಬಲ್ ಪಂಪ್, ಬೈಸಿಕಲ್ ಪಂಪ್’ಗಳು.
ಶುಚಿಗೊಳಿಸುವಿಕೆ, ವಿಂಗಡಣೆ/ ಸಾಧನೆಗಳ ಶ್ರೇಣೀಕರಣಕ್ಕಾಗಿ ಬಳಕೆಯಾಗುವ ಯಂತ್ರಗಳು, ಬೀಜ, ಧಾನ್ಯಗಳು, ಗಿರಣಿ ಉದ್ಯಮ/ ಸಿರಿಧಾನ್ಯಗಳ ಕೆಲಸಕ್ಕಾಗಿ ಬಳಸುವ ಯಂತ್ರೋಪಕರಣಗಳು.
ಹೋಟೆಲ್ ಕೊಠಡಿಗಳಿಗೆ 1000 ರೂಪಾಯಿ ಒಳಗಿನ ಬಾಡಿಗೆಯ ಹೋಟೆಲ್ ಕೊಠಡಿಗಳಿಗೆ ಪ್ರಸ್ತುತ ತೆರಿಗೆ ವಿನಾಯಿತಿ ಇರಲಿದೆ. ಶೇ.12ರಷ್ಟು ತೆರಿಗೆ ಹೊರೆ ಬೀಳಲಿದೆ.

https://suddikanaja.com/2021/06/09/kerc-order-to-increase-the-electricity-tariff-rate/

Leave a Reply

Your email address will not be published. Required fields are marked *

error: Content is protected !!