ಇನ್ನೊಂದು ವರ್ಷ ಬಳ್ಳಾರಿ ಜೈಲಿನಲ್ಲಿ ರೌಡಿ ಕಡೇಕಲ್ ಅಬೀದ್, ಕಾರಣವೇನು?

Kadekal habeed Rowdi

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ತಾಲೂಕಿನ ಕಡೇಕಲ್ ಗ್ರಾಮ ನಿವಾಸಿ ರೌಡಿಶೀಟರ್ ಅಬೀದ್ ಖಾನ್ ಅಲಿಯಾಸ್ ಕಡೇಕಲ್ ಅಬೀದ್(34)ಗೆ ಗೂಂಡಾ ಕಾಯ್ದೆ ಅಡಿ ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಮಾಡುವಂತೆ ಜಿಲ್ಲಾ ದಂಡಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ಅಬೀದ್ ಖಾನ್ ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, 2000ನೇ ಸಾಲಿನಿಂದ ಕಾನೂನು ಬಾಹಿರ ಚಟುವಟಿಕೆಗಳಾದ ಕೊಲೆ, ಕೊಲೆ ಬೆದರಿಕೆ, ಹಲ್ಲೆ ಮತ್ತು ಲಾಭಕ್ಕಾಗಿ ಗಾಂಜಾ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

READ | ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್’ಗೆ ಸ್ಕೆಚ್

ಅಬೀದ್ ವಿರುದ್ಧ 13 ಪ್ರಕರಣಗಳು ದಾಖಲು
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಪ್ರಕರಣ ಸೇರಿದಂತೆ 13 ಅಪರಾಧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಈತನು ಭಾಗಿಯಾಗಿರುವ ಪ್ರಕರಣಗಳಲ್ಲಿ ಕೈಗೊಂಡಿರುವ ಕಾನೂನು ಕ್ರಮಗಳನ್ನು ಕೂಡ ಲೆಕ್ಕಿಸದೇ, ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿರುತ್ತಾನೆ. ಸಾರ್ವಜನಿಕ ಸುವ್ಯವಸ್ಥೆಗೆ ದುಷ್ಪರಿಣಾಮಗಳನ್ನು ಎಸಗುವ ಸಾಧ್ಯತೆಗಳಿರುವುದರಿಂದ ಈತನ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ ಮೇರೆಗೆ ಬಂಧನ ಆಜ್ಞೆಯನ್ನು ಹೊರಡಿಸಿದ್ದಾರೆ.
2022ರ ಜುಲೈ 8ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಅಬೀದ್ ಖಾನ್ ಅಲಿಯಾಸ್ ಕಡೇಕಲ್ ಅಬೀದ್ ಈತನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ನೀಡಿದ ಮೇರೆಗೆ, ಜುಲೈ 18ರಂದು ಸರ್ಕಾರವು ಈ ಆದೇಶವನ್ನು ಸ್ಥಿರೀಕರಿಸಿ, ವ್ಯಕ್ತಿಯ ಬಂಧನದ ಆದೇಶವನ್ನು 2022ರ ಜೂನ್ 6 ರಿಂದ ಒಂದು ವರ್ಷದ ಅವಧಿಯವರೆಗೆ ಮುಂದುವರೆಸಿ ಆದೇಶಿಸಿದೆ.

https://suddikanaja.com/2021/07/30/quarrel-between-two-gangs-in-central-jail/

Leave a Reply

Your email address will not be published. Required fields are marked *

error: Content is protected !!