ಹಂದಿ ಅಣ್ಣಿ ಕೊಲೆ ಆರೋಪಿಗಳು ಶಿವಮೊಗ್ಗ ಪೊಲೀಸರ ವಶಕ್ಕೆ, ಇಂದೇನೇನು ಪ್ರಕ್ರಿಯೆ ನಡೆಯಲಿವೆ?

Accused Handi anni

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಚಿಕ್ಕಮಗಳೂರು (Chikkamagaluru) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  (SP) ಮುಂದೆ ಸೋಮವಾರ ತಡರಾತ್ರಿ ಶರಣಾಗಿದ್ದ ರೌಡಿಶೀಟರ್ ಹಂದಿ ಅಣ್ಣಿ (Handi anni) ಕೊಲೆ ಆರೋಪಿ(Accused)ಗಳನ್ನು ಶಿವಮೊಗ್ಗ ಪೊಲೀಸರು ಮಂಗಳವಾರ ಸಂಜೆ ಕರೆತಂದಿದ್ದಾರೆ‌.
ಬಂಧಿತರಲ್ಲಿ ಶಿವಮೊಗ್ಗ, ಹರಿಹರ, ಹಾವೇರಿ ಮೂಲದವರಾಗಿದ್ದು, ಅವರನ್ನು ಬುಧವಾರ ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ನಂತರ, ಅವರನ್ನು ಶಿವಮೊಗ್ಗ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.
ಬಂಧಿತರ ಹೆಸರುಗಳು
ಕಾರ್ತಿಕ್, ನಿತಿನ್, ಮಧು, ಫಾರೂಕ್, ಆಂಜನೇಯ, ಮದನ್, ಮಧು ಮತ್ತು ಚಂದನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ಇದು ಪ್ರತಿಕಾರದ ಕೊಲೆಯಾಗಿದ್ದು, ಯಾವ ಉದ್ದೇಶಕ್ಕಾಗಿ ಹಂದಿ ಅಣ್ಣಿಯನ್ನು ಕೊಲೆ ಮಾಡಲಾಗಿದೆ ಎಂಬುವುದಕ್ಕೆ ಖಚಿತ ಕಾರಣ ವಿಚಾರಣೆ ನಂತರವಷ್ಟೇ ಗೊತ್ತಾಗಲಿದೆ.


Related news 
ಕೆಲ ಸೆಕೆಂಡ್’ಗಳಲ್ಲಿ ಮರ್ಡರ್, ಹಂದಿ ಅಣ್ಣಿ ಕೊಲೆಯ ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು
ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್’ಗೆ ಸ್ಕೆಚ್
  • ಎಂಟು ಜನ ಆರೋಪಿಗಳು ಚಿಕ್ಕಮಗಳೂರಿನಲ್ಲಿ ಶರಣಾಗಿರುವುದರಿಂದ ಅವರನ್ನು ಶಿವಮೊಗ್ಗದಲ್ಲೂ ಅರೆಸ್ಟ್ ಎಂದು ತೋರಿಸಬೇಕಾಗುತ್ತದೆ.
  • ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಬಂಧಿಸಲಾಗುವುದು.

ಜುಲೈ 14ರಂದು ವಿನೋಬನಗರ ಪೊಲೀಸ್ ಚೌಕಿ ಬಳಿ ರೌಡಿಶೀಟರ್ ಹಂದಿ‌ ಅಣ್ಣಿಯನ್ನು ಮಾರಕಾಸ್ತೃಗಳಿಂದ‌ ಬರ್ಬರ ಕೊಲೆ ಮಾಡಲಾಗಿತ್ತು. ಎಂಟು ಜನ ದುಷ್ಕರ್ಮಿಗಳು ಪುತ್ತೂರಿನಲ್ಲಿ ಕಾರನ್ನು ಬಾಡಿಗೆ ಪಡೆದು ಶಿವಮೊಗ್ಗಕ್ಕೆ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ‌ ನಡೆಯುತ್ತಿದೆ.

https://suddikanaja.com/2022/01/29/needs-protection-to-pangolin-in-western-ghats/

Leave a Reply

Your email address will not be published. Required fields are marked *

error: Content is protected !!