ಬ್ರೇಕಿಂಗ್ ನ್ಯೂಸ್: ಕರ್ಫ್ಯೂ ಏರಿಯಾದಲ್ಲಿ ಪರಿಷ್ಕೃತ ಆದೇಶ, ವ್ಯಾಪಾರಸ್ಥರಿಗೆ ರಿಲೀಫ್, ವಹಿವಾಟು ಸಮಯ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆಯಲ್ಲಿನ ಕರ್ಫ್ಯೂ ಪ್ರದೇಶದಲ್ಲಿ ವಹಿವಾಟಿಗೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ವಹಿವಾಟು ಮಾಡಲು ಗುರುವಾರ ಬೆಳಗ್ಗೆ ಜಿಲ್ಲಾಡಳಿತ ಅವಕಾಶ ನೀಡಿದೆ.
ಬುಧವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 28 ವಿವಿಧ ವ್ಯಾಪಾರಸ್ಥರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿರುವ ಜಿಲ್ಲಾಡಳಿತ ವ್ಯಾಪಾರಕ್ಕೆ ಅನುಕೂಲವಾಗುವಂತೆ ಅವಕಾಶ ನೀಡಿದೆ.
ಈ ಪರಿಷ್ಕೃತ ಆದೇಶ ಗುರುವಾರದಿಂದಲೇ ಅನ್ವಯವಾಗಲಿದೆ. ಇದುವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರಕ್ಕೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಅವಧಿಯಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವುದಿಲ್ಲ ಎಂದು ಸಂಘಟನೆಗಳು ಮನವಿ ಮಾಡಿದ್ದವು.

ನಾಳೆಯಿಂದ ಕರ್ಫ್ಯೂ ಏರಿಯಾದಲ್ಲಿ ವಹಿವಾಟು ವೇಳೆ ಬದಲಾವಣೆ, ವರ್ತಕರ ಆಗ್ರಹಕ್ಕೆ ಡಿಸಿ ಹೇಳಿದ್ದೇನು?

30 smg 1ವ್ಯಾಪಾರಸ್ಥರ ಅನುಕೂಲಕ್ಕಾಗಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ವಹಿವಾಟು ಮಾಡಲು ಕಾಲಾವಕಾಶ ನೀಡಲಾಗಿದೆ. ಕರ್ಫ್ಯೂ ಹೊರತಾದ ಪ್ರದೇಶಗಳಲ್ಲಿ 144 ಜಾರಿಯಲ್ಲಿರಲಿದ್ದು, ಅಲ್ಲಿ ವ್ಯಾಪಾರಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಯಾವುದೇ ಕಾರಣಕ್ಕೂ ಹೆಚ್ಚು ಜನರು ಸೇರುದಂತೆ ಎಚ್ಚರ ವಹಿಸಬೇಕು. ನಿಷೇಧಾಜ್ಞೆ ಮಾರ್ಗಸೂಚಿ ಎಲ್ಲರಿಗೂ ಅನ್ವಯವಾಗಲಿದೆ.
ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ

error: Content is protected !!