ಶಿವಮೊಗ್ಗದಲ್ಲಿ 1308 ಹೆಕ್ಟೇರ್ ಹಾನಿ, 9 ಕೋಟಿಯ ಗ್ರಾಮೀಣ ರಸ್ತೆಗಳು ಹಾಳು

shivamogga rain 1

 

 

ಸುದ್ದಿ ಕಣಜ.ಕಾಂ | DISTRICT | RAIN DAMAGE
ಶಿವಮೊಗ್ಗ: ಇತ್ತೀಚೆಗೆ ‌ಸುರಿದ‌ ಮಳೆ‌ ಹಲವು ಅನಾಹುತಗಳನ್ನು‌ ಸೃಷ್ಟಿಸಿದೆ. ಗ್ರಾಮೀಣ ಪ್ರದೇಶದ‌ ರಸ್ತೆ, ಕಟ್ಟಡ, ಮನೆಗಳು ಹಾನಿಯಾಗಿವೆ.

READ | ಶಿವಮೊಗ್ಗದ ವಿವಿಧ ಶಾಲಾ, ಕಾಲೇಜುಗಳ ಸುತ್ತ ದಿಢೀರ್ ದಾಳಿ, 10 FIR ದಾಖಲು

  • ಜಿಲ್ಲೆಯಲ್ಲಿ‌ ಏನೇನು‌ ಹಾನಿ?
  • ಮಳೆಯಿಂದಾಗಿ 385 ಕಿಮೀ ಗ್ರಾಮೀಣ ರಸ್ತೆಗಳಿಗೆ ₹9.25 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. 63 ಸೇತುವೆ ಮತ್ತು ಮೋರಿಗಳಿಗೆ ₹9.94 ಕೋಟಿ ಹಾನಿ ಉಂಟಾಗಿದೆ.
  • 546 ವಿದ್ಯುತ್ ಕಂಬಗಳಿಗೆ ₹32.31 ಲಕ್ಷ, 6 ಪರಿವರ್ತಕಗಳು ಹಾನಿಗೀಡಾಗಿದ್ದು ₹1.86 ಲಕ್ಷ, 10.90 ಕಿಮೀ ಉದ್ದದ ಒಟ್ಟು ಲೈನ್ ಹಾನಿಗೀಡಾಗಿದ್ದು, ₹5.20 ಲಕ್ಷ ಹಾನಿ ಅಂದಾಜಿಸಲಾಗಿದೆ.
  • 226 ಶಾಲಾ ಕಟ್ಟಡಗಳಿಗೆ ಅಂದಾಜು ₹6.77 ಕೋಟಿ, 219 ಅಂಗನವಾಡಿಗಳಿಗೆ ₹5.27 ಕೋಟಿ ಹಾಗೂ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ₹45 ಲಕ್ಷ ಹಾಗೂ 82 ಕೆರೆಗಳಿಗೆ ₹4.04 ಕೋಟಿ ಹಾನಿ
  • ಅತಿವೃಷ್ಟಿಯಿಂದ 1092 ಹೆಕ್ಟೇರ್ ಭತ್ತ ಹಾಗೂ 281 ಹೆಕ್ಟೇರ್ ಮುಸುಕಿನ ಜೋಳ ಸೇರಿದಂತೆ ಒಟ್ಟಾರೆಯಾಗಿ 1,308 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ
  • ಅತಿವೃಷ್ಟಿಯಿಂದಾಗಿ ಭದ್ರಾವತಿ ತಾಲೂಕಿನಲ್ಲಿ 189 ಮನೆಗಳು ಜಲಾವೃತಗೊಂಡಿದ್ದು, ಇವುಗಳ ಪೈಕಿ 82 ಮನೆಗಳಿಗೆ ₹8.20 ಲಕ್ಷ ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 711 ಮನೆಗಳು ಭಾಗಶಃ ಹಾನಿ, 192 ಮನೆಗಳು ತೀವ್ರ ಹಾನಿ ಹಾಗೂ 58 ಮನೆಗಳು ಪೂರ್ಣ ಹಾನಿಗೊಂಡಿವೆ. 62 ಕೊಟ್ಟಿಗೆ ಮನೆಗಳು ಸಹ ಹಾನಿಗೀಡಾಗಿವೆ.
  • ಅತಿಮಳೆಯಿಂದಾಗಿ 4 ಮಾನವ ಜೀವ ಹಾನಿ ಉಂಟಾಗಿದ್ದು, 3 ಪ್ರಕರಣಗಳಲ್ಲಿ ಒಟ್ಟು ₹15 ಲಕ್ಷ ಪರಿಹಾರ ವಿತರಿಸಲಾಗಿದೆ. 9 ಜಾನುವಾರುಗಳು ಸಾವಿಗೀಡಾಗಿದ್ದು, ₹1.50 ಲಕ್ಷ ಪರಿಹಾರ ಒದಗಿಸಲಾಗಿದೆ

READ | 20 ದಿನಗಳಲ್ಲಿ‌ ಶೇ.,78ರಷ್ಟು ಅಧಿಕ‌ ಮಳೆ

ಪ್ರಸ್ತುತ ಭತ್ತದ ಗದ್ದೆ ಮತ್ತು ಮೆಕ್ಕೆ ಜೋಳ ಹಾಗೂ ಇತರ ಕೃಷಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ವಾರದ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲಾಗುವುದು.
ಜಿ.ಸಿ.ಪೂರ್ಣಿಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಶಿವಮೊಗ್ಗ

ಅತಿವೃಷ್ಟಿಯಿಂದಾಗಿ ನಷ್ಟ ಉಂಟಾಗಬಹುದಾದ 163 ಗ್ರಾಮಗಳನ್ನು ಗುರುತಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ, ಶಿವಮೊಗ್ಗ

ಶೀಘ್ರ ರೈತರಿಗೆ ಪರಿಹಾರ ನೀಡಲು‌ ಸೂಚನೆ
ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

https://suddikanaja.com/2022/07/17/shivamogga-rainfall-damage-details-and-dam-water-level/

 

Leave a Reply

Your email address will not be published. Required fields are marked *

error: Content is protected !!