ಸುದ್ದಿ ಕಣಜ.ಕಾಂ | DISTRICT | COTPA
ಶಿವಮೊಗ್ಗ: ನಗರದ ಪ್ರತಿಷ್ಠಿತ ಕಾಲೇಜುವೊಂದರ ಆವರಣದಲ್ಲಿ ಮದ್ಯ ಸೇವನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ಮಂಗಳವಾರ ಜಿಲ್ಲೆಯಾದ್ಯಂತ ದಿಢೀರ್ ದಾಳಿ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಶಾಲಾ, ಕಾಲೇಜು ಆವರಣದಿಂದ 100 ಮೀಟರ್ ಒಳಗೆ ಹಾಗೂ ಅಂಗಡಿ, ಹೋಟೆಲ್ ಗಳಲ್ಲಿ ಅಕ್ರಮವಾಗಿ ಬಿಡಿ, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ಧ ವಿಶೇಷ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
READ | ಅಮಲಿನಲ್ಲಿ ತೂರಾಡುತ್ತಿದ್ದ ವಿದ್ಯಾರ್ಥಿಗಳ ವಿಡಿಯೋ ವೈರಲ್, ಪೊಲೀಸರೇನು ಹೇಳ್ತಾರೆ?
ಕೋಟ್ಪಾ ಕಾಯ್ದೆ ಅಡಿ ಕೇಸ್, ದಂಡ
ನಿಯಮ ಉಲ್ಲಂಘನೆ ಮಾಡಿ ಶಾಲೆ ಕಾಲೇಜುಗಳ ಸುತ್ತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ವಿರುದ್ಧ ಒಟ್ಟು 646 COTPA ಪ್ರಕರಣಗಳನ್ನು ದಾಖಲಿಸಿ, ₹64,600 ದಂಡ ವಿಧಿಸಲಾಗಿದೆ. COTPA ಕಾಯ್ದೆ ಅಡಿಯಲ್ಲಿ 10 FIR ಗಳನ್ನು ದಾಖಲಿಸಲಾಗಿದೆ ಹಾಗೂ ಶಾಲಾ, ಕಾಲೇಜುಗಳ ಹತ್ತಿರ 294 IMV ಪ್ರಕರಣಗಳು ಮತ್ತು 438 ಲಘು (Petty Cases) ಪ್ರಕರಣಗಳನ್ನು ದಾಖಲಿಸಲಾಗಿದೆ.
https://suddikanaja.com/2021/08/23/school-and-college-re-open-at-shivamogga/