ಸಾರಿಗೆ ನೌಕರರ ಮುಷ್ಕರ, ನಾಳೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾರಿಗೆ ನೌಕರರು ತಮ್ಮನ್ನೂ ಸರ್ಕಾರಿ ನೌಕರರಂತೆ ಕಾಣಿ, ಸಕಾಲಕ್ಕೆ ವೇತನ ನೀಡಿ ಇತ್ಯಾದಿ ಬೇಡಿಕೆಗಳನ್ನು ಪೂರೈಸುವಂತೆ ಪಟ್ಟು ಹಿಡಿದಿವೆ. ಆದರೆ, ಸರ್ಕಾರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ.
ಇದರಿಂದ ಬೇಸತ್ತ ಕಾರ್ಮಿಕರು ಬೀದಿಗಿಳಿದಿದ್ದಾರೆ. ಅದರ ಪರಿಣಾಮದಿಂದಾಗಿ ಶುಕ್ರವಾರ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬಸ್ ಗಳಿದ್ದರೂ ಅದನ್ನು ಓಡಿಸಲು ಚಾಲಕರೇ ಇರಲಿಲ್ಲ. ಅಧಿಕಾರಿಗಳ ಹರಸಾಹಸದ ಬಳಿಕ ನೌಕರರ ಮನವೊಲೈಸಿ ಕೆಲವು ಮಾರ್ಗಗಳಲ್ಲಿ ಬಸ್ ಸೇವೆ ನೀಡಲಾಗಿದೆ. ಆದರೆ, ಶನಿವಾರ ಸಹ ನೌಕರರ ಮುಷ್ಕರ ಮುಂದುವರಿಯುವ ಸಾಧ್ಯತೆ ಇರುವುದರಿಂದ ಶಿವಮೊಗ್ಗದಿಂದ ದೂರ ಕ್ರಮಿಸುವ ಬಸ್ ಲಭ್ಯವಾಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

error: Content is protected !!