Red alert | ಭದ್ರಾವತಿಯಲ್ಲಿ ರೆಡ್ ಅಲರ್ಟ್, ಮುಳುಗಡೆಯ ಭೀತಿ

Rain

 

 

ಸುದ್ದಿ ಕಣಜ.ಕಾಂ | DISTRICT | RAINFALL
ಭದ್ರಾವತಿ: ತಾಲೂಕಿನಲ್ಲಿ ರೆಡ್‌ ಅಲರ್ಟ್(Red alert) ಘೋಷಿಸಿ‌ ತಹಸೀಲ್ದಾರ್ ಆರ್.ಪ್ರದೀಪ್‌ ಆದೇಶಿಸಿದ್ದಾರೆ.
ನಿರಂತರ ಮಳೆ‌ ಸುರಿಯುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. ಅದಕ್ಕಾಗಿ‌ ತಗ್ಗು ಪ್ರದೇಶದಲ್ಲಿರುವ ಜನ ಸುರಕ್ಷಿತ ಪ್ರದೇಶಗಳಿಗೆ‌ ಹೋಗುವಂತೆ ಸೂಚನೆ ನೀಡಲಾಗಿದೆ.

READ | ಭದ್ರಾವತಿ ಹೊಸ ಸೇತುವೆ ಮುಳುಗಡೆ

ಈಗಾಗಲೇ ಹೊಸ ಸೇತುವೆಯ‌ ಮೇಲಿಂದ ನೀರು‌ ಹರಿಯುತಿದ್ದು, ತಗ್ಗು ಪ್ರದೇಶದ ಜನರಲ್ಲಿ‌ ಆತಂಕ ಮನೆ ಮಾಡಿದೆ. ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತಿದ್ದಂತೆ ಹೊಳೆಗೆ ಬಿಡುವ ನೀರಿನ‌ ಪ್ರಮಾಣದಲ್ಲೂ‌ ಹೆಚ್ಚಳವಾಗಲಿದೆ. ಈ‌ ಹಿಂದೆಯೂ ಮುಳುಗಡೆ ಭೀತಿ‌ ಎದುರಾಗಿತ್ತು.‌ ಆದರೆ, ಮಳೆ‌ ಪ್ರಮಾಣ‌‌ ಇಳಿಕೆಯಾಗಿದ್ದರಿಂದ ಹೆಚ್ಚೇನೂ‌ ತೊಂದರೆ ಆಗಿರಲಿಲ್ಲ. ಆದರೆ, ಕಳೆದ‌ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆ‌ ಮತ್ತೆ ಆತಂಕಕ್ಕೆ‌ ಕಾರಣವಾಗಿದೆ.
ಶಿವಮೊಗ್ಗ ನಗರದಲ್ಲೂ‌ ಭೀತಿ
ನಗರದ ಹಲವು ಬಡಾವಣೆಯ ಜನ ಚಿಂತೆಯಲ್ಲಿದ್ದಾರೆ. ಇತ್ತೀಚೆಗೆ ಸುರಿದ‌ ಸ್ವಲ್ಪ‌ ಮಳೆಗೇ ಮನೆಗಳಿಗೆ ನೀರು‌ ನುಗ್ಗಿತ್ತು.‌ ಹವಾಮಾನ‌ ಮುನ್ಸೂಚನೆಯಂತೆ‌ ಮಳೆ‌ ಮುಂದುವರಿಯಲಿದೆ.

https://suddikanaja.com/2022/07/14/shivamogga-rain-and-water-level-in-dams/

 

Leave a Reply

Your email address will not be published. Required fields are marked *

error: Content is protected !!