azadi ka amrit mahotsav | ಬಸವ ಕೇಂದ್ರದಲ್ಲಿ 75 ಜನರಿಂದ ರಕ್ತದಾನ ಶಿಬಿರ ನಾಳೆ, ಯಾರನ್ನು ಸಂಪರ್ಕಿಸಬೇಕು?

Basava matapa

 

 

ಸುದ್ದಿ ಕಣಜ.ಕಾಂ | DISTRICT | BLOOD DONATION
ಶಿವಮೊಗ್ಗ: ನಗರದ ಬಸವಕೇಂದ್ರದಲ್ಲಿ ಆಗಸ್ಟ್ 15ರಂದು ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ 75 ಜನರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಬೆವರು ಬದುಕನ್ನೇ ಸಮರ್ಪಿಸಿದ್ದಾರೆ. ಅವರು ಕೊಟ್ಟ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಮ್ಮ ರಕ್ತ ಎಂಬ ಅಮೃತ ನೀಡಿ ಅರ್ಥಪೂರ್ಣವಾಗಿಸೋಣ. ಅಂದು ನಿಮ್ಮೊಂದಿಗೆ ನಾವೂ ರಕ್ತ ನೀಡಲಿದ್ದೇವೆ ಎಂದರು.

READ | ಮೊಬೈಲ್ ಅಪ್ಲಿಕೇಶನ್ ಆಧರಿಸಿ ನಡೆಯಲಿದೆ ಜನಗಣತಿ 

ರಕ್ತದಾನದ ಪ್ರಯೋಜನಗಳೇನು?
ಸಾರ್ವಜನಿಕರೂ ರಕ್ತ ನೀಡಿ. ಒಂದು ಯುನಿಟ್ ರಕ್ತ ನಾಲ್ಕು ಜನರಿಗೆ ಬಿಳಿರಕ್ತ ಕಣಗಳು, ಕೆಂಪು ರಕ್ತ ಕಣಗಳು, ಹಿಮೋಗ್ಲೋಬಿನ್, ಪ್ಲಾಸ್ಮಾ ಎಂದು ಭಾಗವಾಗಿಸಲು ಅನುಕೂಲವಾಗುತ್ತದೆ. ಅಲ್ಲದೇ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಬದಲಿಗೆ ರಕ್ತ ಪಡೆದವನ ಜೀವ ಉಳಿಯುತ್ತದೆ. ಈ ಕಾರಣದಿಂದ ರಕ್ತ ಅಮೃತವಿದ್ದಂತೆ ಎಂದರು.
ಬಸವಕೇಂದ್ರದ ಈ ಸಂಕಲ್ಪ ಸಾಕಾರಗೊಳಿಸಲು ನಮ್ಮೊಂದಿಗೆ,ಸಂಜೀವಿನಿ ಬ್ಲಡ್ ಬ್ಯಾಂಕ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲ ಘಟಕಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ಘಟಕಗಳು, ಅಕ್ಕನ ಬಳಗ ಮೊದಲಾದ ಸಂಘ ಸಂಸ್ಥೆಗಳು, ಹಲವು ಯುವಕರು ಕೈಜೋಡಿಸಲಿದ್ದಾರೆ
ರಕ್ತದಾನ ಮಾಡುವ ಆಸಕ್ತರು 9844381292 ಸಂಪರ್ಕಿಸಬಹುದು. ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಜಿ.ವಿಜಯಕುಮಾರ್, ಬಸವಕೇಂದ್ರದ ಉಪಾಧ್ಯಕ್ಷ ಪಿ.ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್ ತಳಗಿಹಾಳ, ಯುವ ಮುಖಂಡ ಧೃವಕುಮಾರ್ ಉಪಸ್ಥಿತರಿದ್ದರು.

https://suddikanaja.com/2022/02/11/shivamogga-basavakendra-marulasidda-swamiji-advice-to-students/

Leave a Reply

Your email address will not be published. Required fields are marked *

error: Content is protected !!