ಪೊಲೀಸರಿಗೆ ಚಾಕು ತೋರಿಸಿದ ಆರೋಪಿಯ ಕಾಲಿಗೆ ಗುಂಡೇಟು

police

 

 

ಸುದ್ದಿ ಕಣಜ.ಕಾಂ | CITY | ARREST
ಶಿವಮೊಗ್ಗ: ಗಾಂಧಿ ಬಜಾರಿನಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು‌‌‌‌ ಇರಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಜೆ.ಸಿ.ನಗರದ‌ ನಿವಾಸಿ ನದೀಮ್(25), ಬುದ್ಧನಗರದ ಅಬ್ದುಲ್ ರೆಹಮಾನ್ (25) ಬಂಧಿತ ಆರೋಪಿಗಳು.

READ | ಸಾವರ್ಕರ್ ಫ್ಲೆಕ್ಸ್ ಹರಿದ‌‌ ಬೆನ್ನಲ್ಲೇ ನಡೆದ ಬೆಳವಣಿಗೆಗಳೇನು?

ಪೊಲೀಸರಿಂದ‌ ಕಾಲಿಗೆ ಗುಂಡೇಟು
ನದೀಮ್‌ ಮತ್ತು ಅಬ್ದುಲ್‌ ರೆಹಮಾನ್‌ ಬಂಧನ ಬಳಿಕ ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆಯ ಸಮಯದಲ್ಲಿ ಮಂಗಳವಾರ ಬೆಳಗಿನ ಜಾವ ಮಾರ್ನಾಮಿ ಬೈಲು ನಿವಾಸಿ ಮೊಹಮ್ಮದ್‌ ಜಬೀ ಅಲಿಯಾಸ್ ಚರ್ಬಿ(30) ಎಂಬಾತನನ್ನು‌‌ ಹಿಡಿಯಲು ಹೋದಾಗ ಆತ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗ ವಿನೋಬನಗರ ಪೊಲೀಸ್ ಠಾಣೆ‌ ಪಿಎಸ್.ಐ ಮಂಜುನಾಥ್‌ ಎಸ್‌ ಕುರಿ ಮತ್ತು ಸಿಬ್ಬಂದಿ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಸೇವಾ ಪಿಸ್ತೂಲ್ ನಿಂದ ಗುಂಡು ಹಾರಿಸಿರುತ್ತಾರೆ.
ನಂತರ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!