Operation Leopard | ಬೆಳಗಾವಿಯಲ್ಲಿ ಸಕ್ರೆಬೈಲು ಆನೆಬಿಡಾರದ ಗಜಪಡೆ ಕಾರ್ಯಾಚರಣೆ, ಆನೆಗಳ ಬಗ್ಗೆ ಇಲ್ಲಿದೆ ಕುತೂಹಲಕಾರಿ ಅಂಶಗಳು

Elephant

 

 

ಸುದ್ದಿ ಕಣಜ.ಕಾಂ | DISTRICT | 24 AUG 2022
ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರ(sakrebailu elephant camp)ದ ಎರಡು ಆನೆಗಳನ್ನು ಚಿರತೆ (Leopard) ಹಿಡಿಯುವುದಕ್ಕಾಗಿ ಬೆಳಗಾವಿಗೆ ಕರೆದೊಯ್ಯಲಾಗಿದ್ದು, ಈಗಾಗಲೇ ಕಾರ್ಯಾಚರಣೆಯನ್ನೂ ಆರಂಭಿಸಿವೆ.
ಸಕ್ರೆಬೈಲು ಆನೆಬಿಡಾರದ ಅರ್ಜುನ್ (10) ಮತ್ತು ಆಲೆ‌ (14) ಆನೆಗಳನ್ನು ಮಂಗಳವಾರ ಲಾರಿಯಲ್ಲಿ ಬೆಳಗಾವಿಗೆ ಕರೆದುಕೊಂಡು ಹೋಗಲಾಗಿದೆ. ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಸೂಚನೆಯ ಮೇರೆಗೆ ಕಾರ್ಯಾಚರಣೆ ಮಾಡಲಾಗುತ್ತಿದೆ.

READ | ಶಿವಮೊಗ್ಗದಲ್ಲಿ‌ ಗಣೇಶ ಹಬ್ಬ ಆವರಣೆ ಬಗ್ಗೆ ಡಿಸಿ ಪ್ರಮುಖ‌ ಸಭೆ, ನೀಡಿ‌ದ 7 ಸೂಚನೆಗಳೇನು?

ಆಲೆ, ಅರ್ಜುನನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು
♦ ಅರ್ಜುನನ್ನು ತಾಯಿ ಭಾನುಮತಿಯೊಂದಿಗೆ ಆನೆಬಿಡಾರಕ್ಕೆ 2016ರಲ್ಲಿ ಕರೆತರಲಾಗಿದೆ. 14 ವರ್ಷ ಅರ್ಜುನನಿಗೆ ಇದುವರೆಗೆ ಯಾವುದೇ ಕಾರ್ಯಾಚರಣೆಗಳಿಗೆ ಕರೆದುಕೊಂಡು‌ಹೋಗಿಲ್ಲ‌.‌ ಹೀಗಾಗಿ, ಈ ವಿಚಾರದಲ್ಲಿ ಇವನು ಅನನುಭವಿ. ಆದರೆ, ಶಾಂತ ಚಿತ್ತ, ಮಾವುತರ ಮಾತುಗಳಿಗೆ ಮರು‌ ಮಾತಾಡದೇ ಮುನ್ನಡೆಯುವ ಗುಣ ಇವನದ್ದು. ಎದುರುಗಡೆ ಎಂತಹದ್ದೇ ಸ್ಥಿತಿ‌ ಎದುರಾದರೂ ಸಮರ್ಥವಾಗಿ ಧೈರ್ಯದಿಂದ ಎದುರಿಸುತ್ತಾನೆ.
♦ ನೇತ್ರಾವತಿಯ ಮಗನಾದ ಆಲೆ ಕೂಡ ಕಾರ್ಯಾಚರಣೆ ವಿವಾರದಲ್ಲಿ ಹೊಸಬ. ಇವನದ್ದೂ ಅಪ್ಪಟ ಬಂಗಾರದಂತಹ ಗುಣ. ಈ ಎರಡೂ ಆನೆಗಳು ಇದುವರೆಗೆ ಕ್ಯಾಂಪ್ ನಲ್ಲಿಯೇ ಉಳಿದಿರುತ್ತಿದ್ದವು. ಈಗ ಹೊಸ ಜವಾಬ್ದಾರಿ ಕೊರಳಿಗೆ ಬಿದ್ದಿದೆ. ಅದು ಚಿರತೆ ಹಿಡಿಯುವುದು. ಕಾರ್ಯಾಚರಣೆ ಆರಂಭವಾಗಿದ್ದು, ಉತ್ತಮವಾಗಿ ಸ್ಪಂದಿಸುತ್ತಿವೆ. ಆನೆಗಳೊಂದಿಗೆ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ವಿನಯ್ ಇದ್ದಾರೆ.

https://suddikanaja.com/2022/03/19/home-minister-aarga-jnanendra-visited-the-farmers-farm-in-keegadi-village-which-was-damaged-by-wild-elephants/

Leave a Reply

Your email address will not be published. Required fields are marked *

error: Content is protected !!