Police Raid | ಶಿವಮೊಗ್ಗದ ಹಲವೆಡೆ ಪೊಲೀಸರ ದಿಢೀರ್ ದಾಳಿ, ಕಾರಣವೇನು?

police

 

 

ಸುದ್ದಿ ಕಣಜ.ಕಾಂ | DISTRICT | 25 AUG 2022
ಶಿವಮೊಗ್ಗ: ನಗರದ ಎಸ್.ಡಿ.ಪಿ.ಐ ಕಚೇರಿ ಸೇರಿ ಹಲವೆಡೆ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿ, ಮೊಬೈಲ್ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ವಿನೋಬನಗರ, ತುಂಗಾನಗರ, ಕುಂಸಿ, ಸಂಚಾರಿ ಪೊಲೀಸ್ ಠಾಣೆ ಸೇರಿದಂತೆ ಆರು ಜನ ಪಿಐಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

READ | ಪೊಲೀಸರಿಗೆ ಚಾಕು ತೋರಿಸಿದ ಆರೋಪಿಯ ಕಾಲಿಗೆ ಗುಂಡೇಟು

ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ
ಗಾಂಧಿ ಬಜಾರಿನಲ್ಲಿ ರಾಜಸ್ತಾನ ಮೂಲದ ಪ್ರೇಮ್ ಸಿಂಗ್ ಎಂಬಾತನ ಮೇಲೆ ಚಾಕು ಇರಿದಿದ್ದ ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಳ್ಳುವುದಕ್ಕಾಗಿ ಪ್ರಮುಖದ ಮುಖ್ಯ ಆರೋಪಿ ಜಬಿ ಸಹೋದರ ಮನೆಯ ಮೇಲೆಯೂ ಕಾರ್ಯಾಚರಣೆ ನಡೆಸಲಾಗಿದೆ. ಬುದ್ಧನಗರ, ಮಾರ್ನಮಿಬೈಲು ಸೇರಿದಂತೆ ಹಲವೆಡೆ ದಾಳಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!