Accident | ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಲಾರಿ, ಕ್ಯಾಂಟರ್ ನಡುವೆ ಅಪಘಾತ

Accident

 

 

HIGHLIGHTS

  • ಮಾಚೇನಹಳ್ಳಿ ಸಮೀಪ ಲಾರಿ-ಕ್ಯಾಂಡರ್ ನಡುವೆ ಅಪಘಾತ, ಅದೃಷ್ಟವಶಾತ್ ಸಂಭವಿಸಿಲ್ಲ ಜೀವಹಾನಿ
  • ಶಿವಮೊಗ್ಗ- ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ
  • ಅಪಘಾತದಿಂದಾಗಿ ಕೆಲಹೊತ್ತು ಟ್ರಾಫಿಕ್ ಜಾಮ್

ಸುದ್ದಿ ಕಣಜ.ಕಾಂ‌ | DISTRICT | 14 SEP 2022
ಶಿವಮೊಗ್ಗ: ಮಾಚೇನಹಳ್ಳಿ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದ್ದು, ಲಾರಿ ಮತ್ತು ಕ್ಯಾಂಟರ್’ಗಳ ಮುಂಭಾಗ ಜಖಂಗೊಂಡಿದೆ.
ಶಿವಮೊಗ್ಗ- ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರದ ದಿಮ್ಮಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಎದುಗಡೆಯಿಂದ ಬರುತ್ತಿದ್ದ ಕ್ಯಾಂಟರ್‌ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ. ಎರಡು ವಾಹನಗಳು ನಜ್ಜುಗುಜ್ಜಾಗಿವೆ.
ಮರದ ದಿಮ್ಮಿಗಳನ್ನು ಸಾ ಮಿಲ್’ಗೆ ತರುತ್ತಿದ್ದಾಗ ಘಟನೆ ನಡೆದಿದೆ. ಟಿಂಬರ್ ಲಾರಿಯು ಸಾಮಿಲ್ ಒಳಗಡೆ ಹೋಗುತ್ತಿದ್ದಾಗ ರಿವರ್ಸ್ ತೆಗೆದುಕೊಳ್ಳುವಾಗ ಭದ್ರಾವತಿಯಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಕ್ಯಾಂಟರ್’ಗೆ ಡಿಕ್ಕಿಯಾಗಿದೆ. ಅಪಘಾತದಿಂದಾಗಿ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು.

Leave a Reply

Your email address will not be published. Required fields are marked *

error: Content is protected !!