Suicide | ಶಿವಮೊಗ್ಗದ ಲಾಡ್ಜ್ ನಲ್ಲಿ‌ ವಿಷ‌ ಸೇವಿಸಿ‌ ಯುವಕ ಆತ್ಮಹತ್ಯೆ, ಡೆತ್‌ ನೋಟ್‌ ನಲ್ಲೇನಿದೆ?

Suicide

 

 

HIGHLIGHTS

  • ಸೆಪ್ಟೆಂಬರ್ 13ರಂದು ಶಿವಮೊಗ್ಗ ಆಗಮಿಸಿ 15ರಂದು ವಿಷ ಸೇವಿಸಿ ಆತ್ಮಹತ್ಯೆ
  • ಶಿವಮೊಗ್ಗದ ಹೋಟೆಲ್ ವೊಂದರ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್

ಸುದ್ದಿ ಕಣಜ.ಕಾಂ | DISTRICT | 16 SEP 2022
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ (KSRTC) ಬಸ್‌ ನಿಲ್ದಾಣ(Bus stand)ದ ಹತ್ತಿರ ಇರುವ ಹೋಟೆಲ್ ಒಂದರ ರೂಂನಲ್ಲಿ ತುಮಕೂರು (Tumkur) ಮೂಲದ ವ್ಯಕ್ತಿಯೊಬ್ಬರು ವಿಷ ಸೇವಿಸಿ‌‌‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವದ ಬಳಿ ಡೆತ್ ನೋಟ್ (Death note) ಕೂಡ ಸಿಕ್ಕಿದೆ.

REA | ಬೊಮ್ಮನಕಟ್ಟೆಯಲ್ಲಿರುವ 543 ಆಶ್ರಯ ನಿವೇಶನ ರದ್ದು, ಕಾರಣವೇನು? ಯಾವ ಬ್ಲಾಕ್’ನಲ್ಲಿ‌ಎಷ್ಟು ನಿವೇಶ‌ನ?

ತುಮಕೂರು ಜಿಲ್ಲೆಯ ಕೆರೆಸೂರಗೊಂಡನಹಳ್ಳಿ ಗ್ರಾಮದ ಮಂಜುನಾಥ್‌ (26) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಇವರು ಸೆಪ್ಟೆಂಬರ್ 13ರಂದು ರಾತ್ರಿ ಶಿವಮೊಗ್ಗ(Shivamogga)ಕ್ಕೆ ಆಗಮಿಸಿದ ಲಾಡ್ಜ್ ನಲ್ಲಿ ರೂಂ ಪಡೆದಿದ್ದಾರೆ. ಗುರುವಾರ ರಾತ್ರಿ ಡೆತ್ ನೋಡ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ‌ ಬರೆದಿರುವುದೇನು?
ಮಂಜುನಾಥ್ ಅವರ ‘ದೊಡ್ಡಮ್ಮನ ಮಗಳಾದ ಅಕ್ಕ ಸುಧಾಳು ತನ್ನ ಗಂಡನನ್ನು ಅವಳ ಸ್ನೇಹಿತನ ಜೊತೆ ಸೇರಿಕೊಂಡು ಕೊಲೆ ಮಾಡಿರುತ್ತಾಳೆಂದು ಹೇಳಿಕೊಂಡಿರುತ್ತಾಳೆ. ಈ ವಿಷಯವಾಗಿ ಆಕೆಯ ಮೇಲಿನ ಕೋಪದಿಂದ ಸುಧಾಳನ್ನು ಕೊಲೆ ಮಾಡಿ ಬೀದಿ ಹೆಣ ಮಾಡಿರುತ್ತೇನೆ’ ಎಂದು ಡೆಟ್‌ ನೋಟ್‌ ಬರೆದಿಟ್ಟಿರುತ್ತಾನೆ. ಮೃತನ ಕಡೆಯವರಿಗೆ ಮಾಹಿತಿಯನ್ನು ನೀಡಲಾಗಿದ್ದು, ಅವರುಗಳು ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು‌ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!