Raid | ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ

Hosanagara map

 

 

HIGHLIGHTS

  • ಹುಂಚು ವ್ಯಾಪ್ತಿಯ ಮಳಲಿಕೊಪ್ಪ‌ ಗ್ರಾಮದ ತೋಟವೊಂದರಲ್ಲಿ‌ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕೇಶಿಯಾ ಮರದ ತುಂಡು
  • ಅರಣ್ಯ ಇಲಾಖೆಯ ಅಧಿಕಾರಿಗಳಿಂದ ದಾಳಿ, ಇಬ್ಬರ ವಿರುದ್ಧ ಪ್ರಕರಣ ದಾಖಲು

ಸುದ್ದಿ ಕಣಜ.ಕಾಂ | TALUK | 18 SEP 2022
ಹೊಸನಗರ(Hosanagara): ತಾಲೂಕಿನ ರಿಪ್ಪನ್’ಪೇಟೆ (Rippanapete) ಸಮೀಪದ ಮಳಲಿಕೊಪ್ಪ (Malalikoppa) ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕೇಶಿಯಾ (akeshia) ಮರದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

READ | ಸಿಮ್ಸ್ ನಲ್ಲಿ ಉದ್ಯೋಗ ಅವಕಾಶ, 7 ಹುದ್ದೆಗಳು ಖಾಲಿ, ಆಕರ್ಷಕ ವೇತನ

ಅರಣ್ಯ ಇಲಾಖೆಯ ಅಕೇಶಿಯಾ ನೆಡುತೋಪಿನಲ್ಲಿ ಕಡಿತಲೆ
ಅರಣ್ಯ ಇಲಾಖೆ (forest department) ಅಧಿಕಾರಿಗಳು ದಾಳಿ‌ನಡೆಸಿದ್ದು, ಮಳಲಿಕೊಪ್ಪದ‌ ತೋಟದಲ್ಲಿ ಸಂಗ್ರಹಿಸಿಟ್ಟಿದ್ದ 34 ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಇಲಾಖೆಯ ಅಕೇಶಿಯಾ ನೆಡುತೋಪಿನಲ್ಲಿ ಮರಗಳನ್ನು‌ ಕಡಿತಲೆ ಮಾಡಿದ್ದು, ತೋಟದಲ್ಲಿ ಅಕ್ರಮವಾಗಿ ಮರದ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದಸರೆ ಎಂಬ ಆರೋಪದ ಮೇಲೆ ರಾಮಚಂದ್ರ, ಮುದ್ದಪ್ಪ ಎಂಬುವವರ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

https://suddikanaja.com/2021/04/18/fine-for-not-wearing-mask-in-shivamogga/

Leave a Reply

Your email address will not be published. Required fields are marked *

error: Content is protected !!