Tiger Death | ಶಿವಮೊಗ್ಗ ಮೃಗಾಲಯದಲ್ಲಿ ಹಿರಿಯ ಹುಲಿ ಸಾವು, ಕಾರಣವೇನು?

Tiger Hanuma death

 

 

HIGHLIGHTS 

  • ಹುಲಿ ಮತ್ತು ಸಿಂಹ ಧಾಮದ ಹಿರಿಯ ಹುಲಿ ಹನುಮ ಇನ್ನಿಲ್ಲ
  • ಸಫಾರಿಯಲ್ಲಿಯೇ ಹುಟ್ಟಿ ಬೆಳೆದ ಹನುಮನೆಂದರೆ ಎಲ್ಲರಿಗೂ ಪ್ರೀತಿ
  • ಹನುಮನ ಸಾವಿನಿಂದ ಸಫಾರಿಯಲ್ಲಿ ಸೂತಕದ ಛಾಯೆ

ಸುದ್ದಿ ಕಣಜ.ಕಾಂ | DISTRICT | 22 SEP 2022
ಶಿವಮೊಗ್ಗ(Shivamogga): ತ್ಯಾವರೆಕೊಪ್ಪ (Tyavarekoppa) ಹುಲಿ ಮತ್ತು ಸಿಂಹ ಧಾಮ(Tiger and lion safari) ದ ಹಿರಿಯ ಹುಲಿ ಹನುಮ -Hanuma (20) ಬುಧವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ.

READ | ಶಂಕಿತ ಉಗ್ರರ ಬಂಧನ, ಇದುವರೆಗಿನ ಟಾಪ್ 7 ಬೆಳವಣಿಗೆಗಳೇನು, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕಳೆದ ಮೂರು ವರ್ಷಗಳಿಂದ ಕಾಯಿಲೆಯಿಂದ ಬಳಲುತಿದ್ದ ಹನುಮನಿಗೆ ಚಿಕಿತ್ಸೆ ನೀಡಲಾಗುತಿತ್ತು.ಬುಧವಾರ ಸಂಜೆಯವರೆಗೂ ಆರೋಗ್ಯವಾಗಿಯೇ ಇದ್ದ ಹನುಮ ಮೃತಪಟ್ಟಿದ್ದಾನೆ.
ಸಫಾರಿಯಲ್ಲಿಯೇ ಹನುಮ ಅತ್ಯಂತ ಹಿರಿಯ ಹುಲಿಯಾಗಿದ್ದು, ಪ್ರವಾಸಿಗರ ಪ್ರೀತಿಗೂ ಪಾತ್ರನಾಗಿದ್ದ. ವಯಸ್ಸಾಗಿದ್ದರಿಂದ ಎದ್ದೆಳುವುದಕ್ಕೆ ಮತ್ತು ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತಿತ್ತು.

https://suddikanaja.com/2022/09/10/aggressive-elephant-tried-to-attack-on-a-man-at-sakrebailu-elephant-camp-shimoga/

Leave a Reply

Your email address will not be published. Required fields are marked *

error: Content is protected !!