
HIGHLIGHTS
- ಶಿವಮೊಗ್ಗದ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ ದಾಖಲು
- ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ನೇತೃತ್ವದ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ
ಸುದ್ದಿ ಕಣಜ.ಕಾಂ | DISTRICT | 22 SEP 2022
ಶಿವಮೊಗ್ಗ: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ (muruga shri chitradurga) ಅವರನ್ನು ಬುಧವಾರ ರಾತ್ರಿ ಶಿವಮೊಗ್ಗದ ಮೆಗ್ಗಾನ್ (Meggan hospital) ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೋಸ್ಕರ ಕರೆದುಕೊಂಡು ಬರಲಾಗಿದೆ.
ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ನ್ಯಾಯಾಲಯದ ಸೂಚನೆಯ ಮೇರೆಗೆ ಸ್ವಾಮೀಜಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
READ | ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಎನ್.ಐ.ಎ ತಂಡ ದಾಳಿ, ಒಬ್ಬ ವಶಕ್ಕೆ
ಚಿತ್ರದುರ್ಗದ ಕಾರಾಗೃಹದಿಂದ ಅವರನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಗಳಿಗೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ನೇತೃತ್ವದಲ್ಲಿ ಹೃದ್ರೋಗ ವಿಭಾಗದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕರೋನರಿ ಆಂಜಿಯೇಗ್ರಾಂ ಮತ್ತಿತರೆ ಪರೀಕ್ಷೆ ನಡೆಸಬೇಕಿದೆ ಎಂದು ತಿಳಿದುಬಂದಿದೆ.
ತುಂಗಾ ಕಾಲುವೆ ಎರಡೂ ಬದಿ ತಲೆ ಎತ್ತಲಿವೆ 70 ಸಾವಿರ ವೃಕ್ಷ, ಏನಿದು ಪ್ರಾಜೆಕ್ಟ್?