Swacch Bharat | ಶಿವಮೊಗ್ಗಕ್ಕೆ ಸ್ವಚ್ಛ ಭಾರತ್ ಪ್ರಶಸ್ತಿಯ ಗರಿ, ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ, ಶಿವಮೊಗ್ಗಕ್ಕೆ ಸಿಕ್ಕ ಪ್ರಶಸ್ತಿ ಯಾವುದು?

shimoga Palike

 

 

ಸುದ್ದಿ ಕಣಜ.ಕಾಂ | NATIONAL NEWS | 01 OCT 2022
ಶಿವಮೊಗ್ಗ (shivamogga): ಶಿವಮೊಗ್ಗದ ಕೀರ್ತಿ ಪತಾಕೆ ರಾಷ್ಟ್ರೀಯ ಮಟ್ಟದಲ್ಲಿ ಹಾರಿದೆ. ಶಿವಮೊಗ್ಗ ನಗರಕ್ಕೆ ರಾಷ್ಟ್ರೀಯ ಮಟ್ಟ(National level)ದ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ (Suneetha annappa) ಅವರು ಸ್ವೀಕರಿಸಿದರು.

swaನವದೆಹಲಿಯ ತಲ್ಕಾಟೋರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಯರ್ ಸುನೀತಾ ಅಣ್ಣಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಶಿವಮೊಗ್ಗಕ್ಕೆ ಫಾಸ್ಟರ್ ಮೂವಿಂಗ್ ಸಿಟಿ ಅವಾರ್ಡ್
ಶಿವಮೊಗ್ಗಕ್ಕೆ ‘ಫಾಸ್ಟರ್ ಮೂವಿಂಗ್ ಸಿಟಿ (Fastest Mover City) ಪ್ರಶಸ್ತಿ’ ನೀಡಲಾಗಿದೆ. ಸಮಾರಂಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!