Death | ಗುಂಡಪ್ಪಶೆಡ್ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ‌ ಸಾವು

Dead body

 

 

ಸುದ್ದಿ ಕಣಜ.ಕಾಂ | DISTRICT | 10 OCT 2022
ಶಿವಮೊಗ್ಗ(Shivamogga): ನಗರದ ಗುಂಡಪ್ಪಶೆಡ್ ದೇವಸ್ಥಾನದ ಬಳಿ ನಿತ್ರಾಣವಾಗಿ ಬಿದ್ದಿದ್ದ ಸುಮಾರು 70 ರಿಂದ 75 ವಯಸ್ಸಿನ ನಾಗಮ್ಮ ಎಂಬ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್ 23ರಂದು ಮೃತಪಟ್ಟಿರುತ್ತಾರೆ.

READ | ಶಿವಮೊಗ್ಗದಲ್ಲಿ ನಡೆಯಲಿದೆ ಅ.13ರಂದು‌ ನೇರ ಸಂದರ್ಶನ, ಯಾರೆಲ್ಲ ಪಾಲ್ಗೊಳ್ಳಬಹುದು?

ವಿಳಾಸ ಮತ್ತು ವಾರಸುದಾರರು ಯಾರೆಂದು ತಿಳಿದುಬಂದಿಲ್ಲ. ಮೃತಳು ಸುಮಾರು 5.2 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ತಲೆಯಲ್ಲಿ 8 ಇಂಚು ಉದ್ದದ ಬಿಳಿ ಮತ್ತು ಕಪ್ಪು ಕೂದಲು, ಎಡ ಕೆನ್ನೆಯ ಕೆಳಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈಕೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಪೊಲೀಸ್ ಅಧೀಕ್ಷಕರು (08182-261400), ಪೊಲೀಸ್ ಉಪಾಧೀಕ್ಷಕರು 08182-261404 ಅಥವಾ ಕೋಟೆ ಪೊಲೀಸ್ ಠಾಣೆ ಶಿವಮೊಗ್ಗ ದೂ.ಸಂ: 08182-261415 ಇವರನ್ನು ಸಂಪರ್ಕಿಸಲು‌ ಕೋರಲಾಗಿದೆ.

https://suddikanaja.com/2022/10/08/shivamogga-talent-selected-for-open-national-athletic-championship/

Leave a Reply

Your email address will not be published. Required fields are marked *

error: Content is protected !!