Job Junction | ಶಿವಮೊಗ್ಗದಲ್ಲಿ ಉದ್ಯೋಗ, ಮಾಸಿಕ ₹57 ಸಾವಿರ ವೇತನ, ಕೂಡಲೇ ಅರ್ಜಿ‌ ಸಲ್ಲಿಸಿ

currency

 

 

HIGHLIGHTS

  • ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ
  • ಪ್ರಾಧ್ಯಾಪಕರುಗಳ ಹುದ್ದೆಗಳ ನೇಮಕಾತಿ
    ನೇಮಕಗೊಂಡ ಅಭ್ಯರ್ಥಿಗಳಿಗೆ ₹57,000 ತಿಂಗಳ ವೇತನ

ಸುದ್ದಿ ಕಣಜ.ಕಾಂ | DISTRICT | 10 OCT 2022
ಶಿವಮೊಗ್ಗ(Shivamogga): ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯ(Veterinary college)ದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳ ಗುತ್ತಿಗೆ (Contract) ಆಧಾರಿತ ನೇಮಕಾತಿ ಸಂಬಂಧ ಅಕ್ಟೋಬರ್ 17ರಂದು ಸಂದರ್ಶನ (Interview) ಏರ್ಪಡಿಸಲಾಗಿದೆ.

READ | ಶಿವಮೊಗ್ಗದಲ್ಲಿ ನಡೆಯಲಿದೆ ಅ.13ರಂದು‌ ನೇರ ಸಂದರ್ಶನ, ಯಾರೆಲ್ಲ ಪಾಲ್ಗೊಳ್ಳಬಹುದು?

ಯಾವ ವಿಷಯದಲ್ಲಿ ಎಷ್ಟು ಹುದ್ದೆಗಳು‌ ಖಾಲಿ?
ಪಶುವೈದ್ಯಕೀಯ ಸೂಕ್ಷ್ಮಜೀವಾಣುಶಾಸ್ತ್ರ ವಿಭಾಗ ಹುದ್ದೆ 1, ಪ್ರಾಣಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಭಾಗ ಹುದ್ದೆ 1, ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ಶಾಸ್ತ್ರವಿಭಾಗದ ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ಹುದ್ದೆ 1,  ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯನ್ವಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ನೇಮಕಗೊಂಡ ಅಭ್ಯರ್ಥಿಗಳಿಗೆ ₹57,000 ತಿಂಗಳ ವೇತನ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ ಇಲ್ಲಿ ಅಕ್ಟೋಬರ್‌ 17 ರ ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ: 08182- ಹಾಗೂ ವಿಶ್ವವಿದ್ಯಾಲಯದ ಜಾಲತಾಣ www.kvafsu.edu.in ನ್ನು ಸಂಪರ್ಕಿಸಬಹುದೆಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.

https://suddikanaja.com/2022/09/11/person-who-has-fed-street-dog-if-that-dog-bite-someone-they-should-bear-money-for-treatment-said-sc/

Leave a Reply

Your email address will not be published. Required fields are marked *

error: Content is protected !!