Arecanut Task force | ಭೂತಾನ್ ಅಡಿಕೆ ಆಮದು ವಿಚಾರದಲ್ಲಿ ಅಡಿಕೆ ಕಾರ್ಯಪಡೆ ಮಹತ್ವದ ನಿರ್ಧಾರ, ಏನೇನು‌ ಚರ್ಚೆಯಾಯ್ತ?

arecanut1

 

 

HIGHLIGHTS

  • ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಅಡಿಕೆ ಕಾರ್ಯಪಡೆ ಪ್ರಮುಖ ಮೀಟಿಂಗ್
  • ಅಡಿಕೆ ಬೆಳೆಗಾರರು‌ ಎದುರಿಸುತ್ತಿರುವ ತೊಂದರೆಗಳ‌ ಬಗ್ಗೆ ಪ್ರಸ್ತಾಪ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ
  • ವಿದೇಶಿ ಅಡಿಕೆ‌ ಬಗ್ಗೆ ‌ಕೇಂದ್ರಕ್ಕೆ ಮತ್ತೊಮ್ಮೆ ನಿಯೋಗ‌‌ ಭೇಟಿ ಮಾಡಿ ಸರ್ಕಾರಕ್ಕೆ ಈ‌ ಬಗ್ಗೆ ಮನವರಿಕೆಯ ನಿರ್ಧಾರ

ಸುದ್ದಿ ಕಣಜ.ಕಾಂ | KARNATAKA | 15 OCT 2022
ಬೆಂಗಳೂರು: ವಿಧಾನಸೌಧದಲ್ಲಿ ಶುಕ್ರವಾರ ಅಡಿಕೆ ಕಾರ್ಯಪಡೆ (arecanut task force)ಯ ಸಭೆ ನಡೆದಿದ್ದು, ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಅಡಿಕೆ‌ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ(Araga Jnanendra) ಅಧ್ಯಕ್ಷತೆಯಲ್ಲಿ ನಡೆದ‌ ಸಭೆಯಲ್ಲಿ ಭೂತಾನ್‌ನಿಂದ ಅಡಿಕೆ‌ ಆಮದು ಮಾಡಿಕೊಳ್ಳುತ್ತಿರುವ ವಿವಾರದ ಬಗ್ಗೆ ವಿಸ್ತ್ರತ ವರ್ಚೆ ನಡೆಯಿತು.‌
ಕೇಂದ್ರಕ್ಕೆ ಪರಿಣಾಮಗಳ ಬಗ್ಗೆ ಮನವರಿಕೆ
ಭೂತಾನ್’ನಿಂದ ಹಸಿ ಅಡಿಕೆ (green arecanut) ಆಮದು ಮಾಡಿಕೊಳ್ಳುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಜೊತೆಗೆ, ಭೂತಾನ್ ಮಾತ್ರವಲ್ಲದೇ ಬೇರೆಯ ದೇಶಗಳಿಂದಲೂ ಒಪ್ಪಂದದ ಮೇರೆಗೆ ಅಡಿಕೆ ಆಮದು ಮಾಡಿಕೊಳ್ಳಬಾರದು ಎಂಬ ಬಗ್ಗೆ ತೀರ್ಮಾನಿಸಲಾಯಿತು

READ | ಕೊಳೆ, ಎಲೆಚುಕ್ಕೆ ರೋಗದ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ರಚನೆ

ಸಭೆಯಲ್ಲಿ‌ ಕೈಗೊಂಡ‌ ಪ್ರಮುಖ ನಿರ್ಧಾರಗಳು…

  • ತೆರಿಗೆ ವಂಚನೆ ಮಾಡಿ ಬರುವ ಉತ್ಪನ್ನಕ್ಕೆ ಕಡಿವಾಣ ಹಾಕಬೇಕು. ಕಾಳಸಂತೆಯಲ್ಲಿ ಬರುವ ಅಡಿಕೆಯ ಮೇಲೆ ಸಂಪೂರ್ಣ ನಿರ್ಬಂಧ ಹೇರಬೇಕು. ಈ ಬಗ್ಗೆ ಕೇಂದ್ರಕ್ಕೆ ನಿರ್ಣಯ ಪತ್ರವನ್ನು ತಜ್ಞರ ಸಲಹೆ ಪಡೆದು ಎರಡು ದಿನಗಳಲ್ಲಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು.
  • ರೋಗ ತೀವ್ರ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ, ಇದಕ್ಕೆ ಸೂಕ್ತ ಔಷಧಿ ಇಲ್ಲ. ಇದರ ಬಗ್ಗೆ ಸಂಶೋಧನೆಯ ಅಗತ್ಯವಿದೆ. ಅದಕ್ಕಾಗಿ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಹಾಗೂ ಸಿಬಿಸಿಐಆರ್’ಐ(IBCIRI) ತಜ್ಞರೊಂದಿಗೆ ಸಭೆ ನಡೆಸಲು ನಿರ್ಣಯಿಸಲಾಯಿತು.

ಎಲೆ ಚುಕ್ಕೆ ರೋಗ ಔಷಧಿ ಸಿಂಪರಣೆಗೆ ₹4 ಕೋಟಿ‌ ಬಿಡುಗಡೆ
ಎಲೆ ಚುಕ್ಕೆ ರೋಗಕ್ಕೆ ಔಷಧಿ ಸಿಂಪರಣೆಗೋಸ್ಕರ ರಾಜ್ಯ ಸರ್ಕಾರ ಈಗಾಗಲೇ 4 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಮಂಜೂರು ಮಾಡಿರುವ ಹಣ ಪೂರ್ಣ ಪ್ರಮಾಣದಲ್ಲಿ ಬಳಕೆಯಾದ ಬಳಿಕ ಇನ್ನುಳಿದ ಅನುದಾನ ನೀಡಲಾಗುವುದು ಎಂದು ಜ್ಞಾನೇಂದ್ರ ತಿಳಿಸಿದರು.

ಸಭೆಯಲ್ಲಿ ಕಾರ್ಯಪಡೆ ಸದಸ್ಯ ಹರಿಪ್ರಕಾಶ್ ಕೋಣೆಮನೆ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕೆಆರ್.ಎಎಂ ಲಿ. ಅಧ್ಯಕ್ಷ ಮಂಜಪ್ಪ, ನಿವೃತ್ತ ನಿರ್ದೇಶಕ ಪಿ.ಚೌಡಯ್ಯ, ಮ್ಯಾಮ್ಕೋಸ್‍ನ ಸುಬ್ರಹ್ಮಣ್ಯ, ತೋಟಗಾರಿಕೆ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

https://suddikanaja.com/2022/10/13/agriculture-survey-held-first-time/

Leave a Reply

Your email address will not be published. Required fields are marked *

error: Content is protected !!