Arrest | ಮನೆಯಲ್ಲಿ ಕಳ್ಳತನ ಕೇಸ್‍ನಲ್ಲಿ ಇಬ್ಬರು ಅಂದರ್

tunga nagar ps

 

 

ಸುದ್ದಿ ಕಣಜ.ಕಾಂ | SHIMOGA CITY | 20 OCT 2022
ಶಿವಮೊಗ್ಗ: ಮನೆಯ ಹಿಂಬಾಗಿಲು ಮುರಿದು ಬೀರುವಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.

READ | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಸಾವರ್ಕರ್ ಮೊಮ್ಮಗ, ನಡೆಯಲಿದೆ ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮ

ಕೆಳಗಿನ ತುಂಗಾನಗರದ ತಬ್ರಕ್ ಉಲ್ಲಾ (20), ಅಣ್ಣಾನಗರದ ಸೈಯ್ಯದ್ ಸುಭಾನ್ (20) ಬಂಧಿತರು. ಇವರ ಬಳಿಯಿಂದ 2 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 64 ಗ್ರಾಂ ಬಂಗಾರದ ಆಭರಣಗಳು, 200 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು 5,000 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.
ಮೇಲಿನ ತುಂಗಾನಗರದ ವಾಸಿಯೊಬ್ಬರ ಮನೆಯ ಹಿಂಭಾಗದ ಬಾಗಿಲು ಮುರಿದು ಯಾರೋ ಕಳ್ಳರು ಬೀರುವಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತುಂಗಾನಗರ ಪಿಐ ಮತ್ತು ಸಿಬ್ಬಂದಿಯ ತಂಡವು ತನಿಖೆ ಕೈಗೊಂಡು ಪ್ರಕರಣ ಬೇಧಿಸಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/10/19/special-train-from-shivamogga-and-states-other-places-in-deepawali-festival-season/

Leave a Reply

Your email address will not be published. Required fields are marked *

error: Content is protected !!