Sambhavami Yuge Yuge | ಹಿಂದೂ ಮಹಾಸಭಾ ಗಣಪತಿ ವೈಭವ ಸಾರುವ “ಸಂಭಾವಮಿ ಯುಗೇ ಯುಗೇ” ಹಾಡು ರಿಲೀಸ್, 2 ಗಂಟೆಯಲ್ಲೇ ಸಾವಿರಾರು ವೀವ್ಸ್

Hindu mahasabha sambhavami yuge yuge

 

 

HIGHLIGHTS

  • ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಅಶೋಕ ಸಾವರ್ಕರ್ ಅವರು ಹಾಡನ್ನು ಲೋಕಾರ್ಪಣೆಗೊಳಿಸಿದ್ದಾರೆ
  • ಹಾಡು ಯೂಟ್ಯೂಬ್ ಗೆ ಪೋಸ್ಟ್ ಮಾಡಿದ 2 ಗಂಟೆಯಲ್ಲೇ 1.7 ವೀವ್ಸ್
  • ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯ ವೈಭವ ಬಿಂಬಿಸುವ ಸಾಂಗ್
  • ಗಣೇಶ ಉತ್ಸವದ ಪ್ರಯುಕ್ತ 2019ರಲ್ಲಿ ರಕ್ತದ ಕಣ ಕಣ ಕೂಗುತಿದೆ ಹಾಗೂ 2022ರಲ್ಲಿ ಸಂಭವಾಮಿ ಯುಗೇ ಯುಗೇ ಹಾಡು

ಸುದ್ದಿ ಕಣಜ.ಕಾಂ | DISTRICT | 23 OCT 2022
ಶಿವಮೊಗ್ಗ(shivamogga): 2022ನೇ ಸಾಲಿನ ಹಿಂದೂ ಮಹಾಸಭಾ (Hindu mahasabha) ಗಣೇಶ ಉತ್ಸವ ಸಾರುವ ಹಾಡನ್ನು ಭಾನುವಾರ ಯೂಟ್ಯೂಬ್‍(Youtube)ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಹಾಡು ಪೋಸ್ಟ್ ಮಾಡಿದ ಎರಡು ಗಂಟೆಯಲ್ಲೇ 1.7 ಸಾವಿರ ಜನ ವೀಕ್ಷಿಸಿದ್ದು, ಫುಲ್ ವೈರಲ್ (viral) ಆಗಿದೆ.
ವೀರ ಸಾವರ್ಕರ್ ಮೊಮ್ಮಗನಿಂದ ಹಾಡು ರಿಲೀಸ್
ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಅಶೋಕ ಸಾವರ್ಕರ್ (satyaki ashok savarkar) ಅವರು ಶನಿವಾರ ಈ ಹಾಡನ್ನು ಲೋಕಾರ್ಪಣೆಗೊಳಿಸಿದ್ದಾರೆ.

READ | ರಾಮ ಮಂದಿರ ಸ್ಫೋಟದ ಸಂಚು ಹಿಂದೂ ಸಮಾಜಕ್ಕೆ ಬಹುದೊಡ್ಡ ಆಘಾತ

ಮಲೆನಾಡಿನ ಹೆಬ್ಬಾಗಿಲು (Gateway of malnad) ಶಿವಮೊಗ್ಗದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುವ ಹಿಂದೂ ಮಹಾಸಭಾದ ಗಣೇಶ ಹಬ್ಬದ ವಿಸರ್ಜನಾ ಪೂರ್ವ ಮೆರವಣಿಗೆಗೆ ಲಕ್ಷಾಂತರ ಜನ ಸೇರುತ್ತಾರೆ. ಅದರಲ್ಲೂ ಕಳೆದ ಮೂರು ವರ್ಷಗಳಿಂದ ಕೋವಿಡ್ (Covid) ಕಾಯಿಲೆಯಿಂದಾಗಿ ಗಣೇಶ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಈ ಸಲ ಯಾವುದೇ ಅಡೆತಡೆಗಳು ಇಲ್ಲದ್ದಕ್ಕೆ ವಿಜೃಂಭಣೆಯಿಂದ ಹಬ್ಬ ಹಾಗೂ ಮೆರವಣಿಗೆಯನ್ನು ಆಚರಿಸಲಾಗಿತ್ತು. ಅದರ ನಂತರ ವಿಡಿಯೋ ಲೋಕಾರ್ಪಣೆಗೊಳಿಸಲಾಗಿದೆ.
ಹಾಡಿನಲ್ಲಿ ಏನಿದೆ?
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ “ಸಂಭವಾಮಿ ಯುಗೇ ಯುಗೇ…’ ಶ್ಲೋಕವನ್ನೇ ಆಧರಿಸಿ ಟೈಟಲ್ ಸಾಂಗ್ ಸಿದ್ಧಪಡಿಸಲಾಗಿದೆ. ಇದು ವೀಕ್ಷಕರ ಮನಸ್ಸು ಗೆದ್ದಿದೆ. ಲಿರಿಕ್ಸ್ ನಲ್ಲಿರುವ ಪದಗಳ ಜೋಡಣೆ ಮೈಜುಮ್ಮೆನ್ನುವಂತೆ ಮಾಡುತ್ತದೆ.
ಹಾಡಿನುದ್ದಕ್ಕೂ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ವೈಭವವನ್ನು ಕಾಣಬಹುದಾಗಿದೆ. ಗಾಂಧಿ ಬಜಾರ್ ಪ್ರವೇಶ ದ್ವಾರದ ಸೌಂದರ್ಯ, ಸಾವರ್ಕರ್, ಹರ್ಷ, ಛತ್ರಪತಿ ಶಿವಾಜಿ, ಶಿವಪ್ಪನಾಯಕ ವೃತ್ತದ ಚಿತ್ರಗಳು ವಿಡಿಯೋದ ಆಕರ್ಷಣೆಯಾಗಿವೆ.

ಪೃಥ್ವಿಗೌಡ ಕಂಠಸಿರಿಯಲ್ಲಿ ಸಂಭವಾಮಿ ಯುಗೇ ಯುಗೇ

  • ಸಂಭವಾಮಿ ಯುಗೇ ಯುಗೇ… ಹಾಡನ್ನು ಪೃಥ್ವಿ ಗೌಡ ಅವರೇ ಕಂಪೋಸ್ ಮಾಡಿ, ದನಿ ನೀಡಿದ್ದಾರೆ.
  • ಲಿರಿಕ್ಸ್, ಕಾನ್ಸೆಪ್ಟ್- ವಿವೇಕ್ ಮಾಣಿಕ್ಯ
  • ಮ್ಯೂಸಿಕ್ ಮಿಕ್ಸಿಂಗ್- ವಿಠ್ಠಲ್ ರಾವ್ ರಂಗದೋಳ್
  • ಡಿಓಪಿ(ಡೈರೆಕ್ಟರ್ ಆಫ್ ಫೋಟೋಗ್ರಫಿ)- ಡ್ರೋಣ್ ಪ್ರದೀಪ್
  • ಎಡಿಜಿಂಗ್- ಅಕ್ಷಯ್
  • ಸಿನಿಟೋಗ್ರಫಿ- ರಾಮ್, ಕೌಶಿಕ್, ಅಭಿ, ಜೀತು, ವಿಕ್ಕಿ, ಪವನ್

Leave a Reply

Your email address will not be published. Required fields are marked *

error: Content is protected !!